
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ.15 :- ಭಾರತವು ವೈಜ್ಞಾವಿಕವಾಗಿ ಬಹಳಷ್ಟು ಮುಂದುವರೆಯುತ್ತಿದ್ದೂ ವಿಶ್ವದ ಮುಂದುವರೆದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಒಂದಾಗಿದೆ ಇದು ನಮ್ಮ ಹೆಮ್ಮೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ 77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಇದು ಇಡೀ ದೇಶವೇ ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಿ ಸ್ವತಂತ್ರ ಪಡೆದ ಕುರುಹುವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ದೇಶದ ಸ್ವತಂತ್ರಕ್ಕೆ ಹೋರಾಡಿದ ಅನೇಕ ದೇಶಭಿಮಾನಿಗಳ ತ್ಯಾಗ ಬಲಿದಾನ ನೆನಪಿಸಬೇಕಿದೆ. ರಾಜ್ಯದ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಜಾರಿಯಾಗಿದ್ದು ಕೂಡ್ಲಿಗಿ ತಾಲೂಕಿನಲ್ಲಿ 9ಲಕ್ಷ 55ಸಾವಿರದಷ್ಟು ಮಹಿಳೆಯರು ಶಕ್ತಿ ಯೋಜನೆ ಬಳಕೆಮಾಡಿಕೊಂಡಿದ್ದಾರೆ. ಅದರಂತೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿ ಉಪಯೋಗ ಪಡೆದುಕೊಂಡಿದ್ದಾರೆ ಎನ್ನುವುದಕ್ಕೆ ಸಂತಸ ಎನಿಸುತ್ತದೆ. ಕುಡಿಯುವ ನೀರು ಹಾಗೂ ಕೆರೆನೀರು ತುಂಬಿಸುವ ಯೋಜನೆ ಸದ್ಯದಲ್ಲೇ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಆರೋಗ್ಯ ಹಿತದೃಷ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಾಗೂ ಪಟ್ಟಣದ 100ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ತಿಳಿಸಿದರು.
ಸ್ವಚ್ಛತೆಗೆ ಅಭಿಯಾನ : ಕೂಡ್ಲಿಗಿ ಕ್ಷೇತ್ರದಲ್ಲಿ ಉತ್ತಮ ಪರಿಸರ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೂಡ್ಲಿಗಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಹಾಗೂ ಕಣ್ಣಿನ ಪೊರೆ ಇರುವ ಜನರಿಗೆ ಚಿಕಿತ್ಸೆ ಕೊಡಿಸುವ ಮೂಲಕ ಪೊರೆಮುಕ್ತ ತಾಲೂಕಾಗಿ ಮಾಡುವ ಮಹದಾಸೆ ನನ್ನದು ಎಂದು ಶಾಸಕರು ತಿಳಿಸಿದರು.
ಕೂಡ್ಲಿಗಿ ತಹಸೀಲ್ದಾರ್ ಧ್ವಜಾರೋಹಣ ಮಾಡಿ ದೇಶದ ಪ್ರಗತಿ, ದೇಶದ ಸ್ವತಂತ್ರಕ್ಕೆ ಪ್ರಾಣ ಬಲಿದಾನ ಬಲಿದಾನ ಗೈದ ವೀರಯೋಧರ ನೆನಪು, ದೇಶದ ಪ್ರಗತಿಗೆ ವೈಜ್ಞಾನಿಕವಾಗಿ ದೇಶದ ವಿಜ್ಞಾನಿಗಳು ಇಡುತ್ತಿರುವ ಹೆಜ್ಜೆ ಬಗ್ಗೆ ಸಂದೇಶ ಸಾರಿದರು.
ನಿವೃತ್ತ ಯೋಧರಿಗೆ, ಪೌರಾಕಾರ್ಮಿಕರಿಗೆ,ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸನ್ಮಾನ ಹಾಗೂ ಪ್ರಶಂಸನ ಪತ್ರ ವಿತರಿಸಿದರು.
ವಿನಾಯಕ ಶಾಲೆಯ ಮಕ್ಕಳಿಂದ ಮಾಳ್ಗಿ ರಾಘವೇಂದ್ರ ಅವರ ನಿರ್ದೇಶನದ ಅಂಬೇಡ್ಕರ್ ಜೀವನ ಚರಿತ್ರೆಯ ನೃತ್ಯ ರೂಪಕದಿಂದ ಬೆರಗಾದ ಶಾಸಕರು ಹಾಗೂ ಇತರರು ಸೇರಿದಂತೆ ಮನಸೂರೆಗೊಂಡರು ಅಲ್ಲದೆ ಶಾಸಕರು ತಕ್ಷಣ ವೇದಿಕೆಯಿಂದ ಕೆಳಗೆ ಎದ್ದು ಬಂದು ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.
ಇಓ ವೈ ರವಿಕುಮಾರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ, ಪ ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ಸುರೇಶ ತಳವಾರ,ಪ ಪಂ ಸರ್ವಸದಸ್ಯರುಗಳಾದ ಕಾವಲಿ ಶಿವಪ್ಪ ನಾಯಕ, ಈಶಪ್ಪ, ಚಂದ್ರು, ಬಾಸುನಾಯ್ಕ್, ಪೂರ್ಯಾನಾಯ್ಕ್, ಸಿರಿಬಿ ಮಂಜು, ಶುಕೂರ್ , ಸಚಿನಕುಮಾರ,ಸರಸ್ವತಿ ರಾಘವೇಂದ್ರ, ತಳಾಸ್ ವೆಂಕಟೇಶ, ರೇಣುಕಾ ದುರುಗೇಶ, ಡಾಣಿ ಚೌಡಮ್ಮ, ನಿಂಗಮ್ಮ ಕೊತ್ಲಾಪ್ಪ, ಲೀಲಾವತಿ ಪ್ರಭಾಕರ, ಸರಸ್ವತಿ ರಮೇಶ, ಲಕ್ಷ್ಮೀದೇವಿ ಬಸವರಾಜ, ಶಾಂತಮ್ಮ ಹಾಗೂ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಜಿಂಕಲ್ ನಾಗಮಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಳ ಪಥಸಂಚಲನ ಜರುಗಿತು ಮತ್ತು ಶಾಸಕರು ಸೇರಿದಂತೆ ಪ್ರಮುಖರು ಮಹಾತ್ಮಾ ಗಾಂಧೀಜಿ ಪವಿತ್ರ ಚಿತಾಭಸ್ಮ ಹುತಾತ್ಮರ ಸ್ಮಾರಕಕ್ಕೆ ಪುಷ್ಪಮಾಲೆ ಅರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದ ಆವರಣದಲ್ಲಿ ಕೂಡ್ಲಿಗಿ ತಹಸೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ನಂತರ ಶಾಲಾಮಕ್ಕಳ ದೇಶಭಕ್ತಿಗೀತೆಗಳ ಸಾಂಸ್ಕೃತಿಕ ನೃತ್ಯ ನಡೆಯಿತು.