ವೈಜ್ಞಾನಿಕವಾಗಿ ಬಾಡಿಗೆ ದರ ನಿಗದಿಪಡಿಸುವಂತೆ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.29: ತಾಲೂಕು ಕಾರು ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಸೂಕ್ತ ಬಾಡಿಗೆ ದರ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ
ಮೇ ಹತ್ತರಂದು ರಾಜ್ಯದಲ್ಲಿ ನಡೆಯುವ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗಾಗಿ ಬಾಡಿಗೆಗಾಗಿ ಕಾರುಗಳನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಅಧಿಕಾರಿಗಳು ಪಡೆಯುತ್ತಿದ್ದಾರೆ. ಆದರೆ ಅವರು ನಿಗದಿಪಡಿಸಿರುವ ದರವು ಒಂದು ದಿನದ ಅವಧಿಯಲ್ಲಿ 106 ಕಿಲೋಮೀಟರ್ ಚಲಿಸಿದಲ್ಲಿ 1550 ರೂಪಾಯಿಗಳ ಪಾವತಿ ನೀಡುವುದಾಗಿ ತಿಳಿಸಿದ್ದಾರೆ.
ಆದರೆ ನಮಗೆ ಇದು ನಷ್ಟವಾಗುತ್ತದೆ ಕೇವಲ ಡೀಸೆಲ್ ಒಂದಕ್ಕೆ ಸುಮಾರು 900 ರೂಪಾಯಿಗಳು ಖರ್ಚಾಗುತ್ತದೆ ವಾಹನ ನಿರ್ವಹಣೆ ಹಾಗೂ ಊಟ ಉಪಾಹಾರ, ಟೀ-ಕಾಫಿಯ ಹಣ ನಾವೇ ಭರಿಸಿಕೊಂಡರೆ ನಮಗೆ ನಷ್ಟವಾಗುತ್ತಿದೆ. ಆದ್ದರಿಂದ ನಮ್ಮ ಬಾಡಿಗೆಯ ಕಾರುಗಳನ್ನು ಅಧಿಕಾರಿಗಳ ಹೇಳುತ್ತಿರುವ ದರದಲ್ಲಿ ನೀಡಲಾಗುವುದಿಲ್ಲ ಮತ್ತು ಇದಕ್ಕೆ ಸಂಬಂಧಪಟ್ಟ ಹಣ ಪಾವತಿಸುವ ಅಧಿಕಾರಿಗಳು ಯಾರು ಯಾವಾಗ ಬಾಡಿಗೆ ಹಣ ನೀಡುತ್ತಾರೆ ಎಂಬುದರ ಬಗ್ಗೆ ಅಧಿಕೃತವಾಗಿ ನೀಡಿ ದರ ಪರಿಷ್ಕರಣೆ ಮಾಡಿದಲ್ಲಿ ಮಾತ್ರ ವಾಹನಗಳನ್ನು ಚುನಾವಣೆಗೆ ನೀಡುವುದಾಗಿ ಶನಿವಾರ ತಾಲೂಕು ಕಚೇರಿಯ ಅಧಿಕಾರಿ ಸಿದ್ದಲಿಂಗ ಸ್ವಾಮಿ ಇವರಿಗೆ ಅಧಿಕೃತವಾಗಿ ಮನವಿ ಪತ್ರ ನೀಡಿ ವಿನಂತಿಸಿಕೊಂಡಿದ್ದಾರೆ.
 ಇದೇ ಸಂದರ್ಭದಲ್ಲಿ ಅನೇಕರು ಮಾತನಾಡಿ ಬಾಡಿಗೆಗಾಗಿ ವಾಹನಗಳನ್ನು ನೀಡುವಂತೆ ಆರ್‌ಟಿಓ ಅಧಿಕಾರಿಗಳು ನಮಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ವಾಹನ ನೀಡದಿದ್ದಲ್ಲಿ ಮುಂದೆ ಅದಕ್ಕೆ ತಕ್ಕ ಪಾಠ ಕಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಇದರಿಂದಾಗಿ ನಾವುಗಳು ಈ ದಿನ ಏಕಸ್ತರಾಗಿ ಮನವಿ ಪತ್ರ ಸಲ್ಲಿಸಿದ್ದೇವೆಂದು ತಿಳಿಸಿದರು
 ಈ ಸಂದರ್ಭದಲ್ಲಿ ಕಾರು ಮಾಲೀಕರು ಮತ್ತು ಚಾಲಕರು ಸಂಘದ ಉಪಾಧ್ಯಕ್ಷ ಎಂ. ಸುಬಾನ್, ಪ್ರಧಾನ ಕಾರ್ಯದರ್ಶಿ ಅನ್ವಾರ್ ಭಾಷಾ, ಜಂಟಿ ಕಾರ್ಯದರ್ಶಿ ಮುರ್ತುಜ, ಹಾಗೂ ಕೋಶಾಧ್ಯಕ್ಷ ವೀರೇಶ್, ಗೌರವಾಧ್ಯಕ್ಷ ಇನಾಯತ್, ಕೆ. ವೆಂಕಟೇಶ, ಬಾಬು, ಸಲೀಂ, ನಂದೀಶ, ಎಂ ಶಿವ, ಬಾಬುನಾಯ್ಕ, ಹೆಚ್.ಎಂ. ಶಾಂತಸ್ವಾಮಿ, ಜಗದೀಶ, ರಾಮಕೃಷ್ಣ, ಕೆ.ಸುರೇಶ, ತುಕಾರಾಮ, ರಾಮು, ಪರಶುರಾಮ, ಕಿರಣ್ ಸೇರಿದಂತೆ ಅನೇಕರು ಇದ್ದರು.