ವೈಕುಂಠ ಏಕಾದಶಿ ಸಂಭ್ರಮ

ಸಂಡೂರು :ಡಿ:26 ಹಿಂದುಗಳು ಪವಿತ್ರದ ದಿನವಾಗಿರುವ ವೈಕುಂಟ ಏಕಾದಶಿಯನ್ನು ಉತ್ತರಾಯಣ ಪುಣ್ಯಕಾಲ ಆರಂಭದಿನವೆಂದು ನಂಬಿದ ಭಕ್ತ ಸಮೂಹ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಕನ್ನಿಕ ಪರಮೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ನೆರವೇರಿಸಲಾಯಿತು. ಉದಯಕಾಲದಲ್ಲಿ ಬ್ರಹ್ಮಿ ಮೂಹೂರ್ತದಲ್ಲಿಯೇ ಭಕ್ತರು ಸಲಾಗಿ ನಿಂತು ಸ್ವಾಮಿಯ ಹಾಗೂ ತಾಯಿಯ ದರ್ಶನವನ್ನು ಪಡೆದರು. ಎರೆಡು ಕಡೆ ಹೂವಿನ ಅಲಂಕಾರ ವಿಶೇಷ ಅಲಂಕಾರ ಮಾಡಲಾಯಿತು. ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮ ಪಠಿಸಿದರೆ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಪಠಣ ನೆರವೇರಿಸಿದರು. ಎರೆಡು ದೇವಸ್ಥಾನಗಳಲ್ಲಿ ಪಂಚಾಮೃತ ಜಲಾಭಿಷೇಕ ವಿಶೇಷ ಪೂಜೆ ನೆರವೇರಿಸಿಲಾಯಿತು.