ವೈಕುಂಟ ಏಕಾದಶಿ;ವಿಜೃಂಭಣೆ ಪೂಜೆ

ಕೆಂಗೇರಿ.ಡಿ೨೪: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಗೇರಿ ವಾರ್ಡ್ ನ ಕೆಂಗೇರಿ ಉಪನಗರ ಮುಖ್ಯ ರಸ್ತೆಯ ವಿಶ್ವ ವಿದ್ಯಾ ಗಣಪತಿ ಮಹಾಸಂಸ್ಥಾನ ಆವರಣದಲ್ಲಿ ಶ್ರೀ ವೈಕುಂಠ ಏಕಾದಶಿ ಮಹೋತ್ಸವವನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶುದ್ಧ ವೈಕುಂಠ ಏಕಾದಶಿ ಎಂದು ಸ್ವಾಮಿಗೆ ಮುಂಜಾನೆ ಸುಪ್ರಭಾತ ಸೇವೆ, ಪಟ್ಟು ಪೀತಾಂಬರ ವಸ್ತ್ರಲಂಕಾರ, ತೋಮಾಲೆ ಸೇವೆ, ಪುಷ್ಪಲಂಕಾರ, ಅಷ್ಟಾಕ್ಷರಿ, ಹೋಮ ಮತ್ತು ವಿಶೇಷವಾಗಿ ವೈಕುಂಠ ದ್ವಾರ ಪ್ರವೇಶ ಶಾತ್ತುಮರೈ ಮಹಾಮಂಗಳಾರತಿ ಶ್ರೀ ವಾರಿಯವರ ಸರ್ವ ದರ್ಶನ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಪಂಚಾಮೃತ ಅಭಿಷೇಕ ,ವೈಕುಂಠ ದ್ವಾರ ಸೇವೆ, ತುಪ್ಪದ ದೀಪದ ಸೇವೆ ತೋಮಾಲಸೇವೆ ಸ್ವಾಮಿಗೆ ಹೂವಿನ ಅಲಂಕಾರ ಹಾಗೂ ಸರ್ವ ಸೇವೆಯನ್ನು ನೆರವೇರಿಸಿದರು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತಾದಿಗಳು ಸರಿತಿಸಾಲಿನಲ್ಲಿ ನಿಂತು ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ವೈಕುಂಠ ವಾಸನ ಕೃಪೆಗೆ ಪಾತ್ರರಾದರು. ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬಿಬಿಎಂಪಿ ಮಾಜಿ ಸದಸ್ಯೆ ಶಾರದ ಮುನಿರಾಜು, ಗಿರೀಶ್, ಕೃಷ್ಣ, ನಿರಂಜನ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.