ವೇಷ ಭೂಷಣ ಸ್ಪರ್ಧೆ ಫಲಿತಾಂಶ

ಧಾರವಾಡ ನ.13-12 ವರ್ಷ ದೊಳಿಗಿನ ಮಕ್ಕಳಿಗೆ ನಗರದ ಸುದಿಶಾ ಇವೆಂಟ್ಸ್ ಹಾಗೂ ಕಲಾ ಸ್ಪಂದನ-ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪೌರಾಣಿಕ ಪಾತ್ರ, “ಖಳನಾಯಕ/ಖಳನಾಯಕಿಯ” ಪಾತ್ರದ ಆನ್ಲೈನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ತಮ್ಮ-ತಮ್ಮ ಆಸಕ್ತಿಯ ಖಳನಾಯಕ, ಖಳನಾಯಕಿಯರ ಪಾತ್ರದ ವೇಷಭೂಷಣದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಅವರೆಲ್ಲರಿಗೂ ಸುದಿಶಾ ಇವೇಂಟ್ಸ್ ಮತ್ತು ಕಲಾ ಸ್ಪಂದನ ಸಂಸ್ಥೆಯವರು ಅಭಿನಂದನೆಗಳನ್ನು ತಿಳಿಸಿದರು.

ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದವರ ವಿವರ :-ಪ್ರಥಮ- ಋತು ವಿ. ಸಜ್ಜನ – ಶಕುನಿ ಪಾತ್ರ,ದ್ವಿತೀಯ ಖುಷಿ ಬಿ. ಗಜೇಂದ್ರಗಡ – ರಾಮಾಯಣದ ರಾಕ್ಷಸಿ ಪಾತ್ರ, ದ್ವಿತೀಯ ಸಾತ್ವಿಕ ಜಾಬಗೌಡರ – ಕಂಸ ಪಾತ್ರತೃತೀಯ : ಅನ್ವಿತಾ ಎನ್.ಬಿ – ಮಹಿಷಿ ಪಾತ್ರ,ತೃತೀಯ ಸಾಯಿಶ್ರೇಯಾ ಜಾಬಗೌಡರ ರಾವಣ ಪಾತ್ರ

ರಂಗಾಯಣ ಆವರಣದಲ್ಲಿ ನಡೆದ ಈ ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ,    ಶ್ರೀಮತಿ ಮಂಜುಳಾ ಯಲಿಗಾರ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಧಾರವಾಡ, ಮಾತನಾಡುತ್ತ. ಮಕ್ಕಳು ಆನ್ಲೈನ್ ಕ್ಲಾಸನಿಂದ ಬೇಸತ್ತು ತಂದೆ ತಾಯಿಗಳನ್ನು ಕಾಡುತ್ತಿರುವ ಸಂದರ್ಭದಲ್ಲಿ ಆ ಸಮಯವನ್ನು ಸಂತೋಷವಾಗಿ ಕಳೆಯಬೇಕು ಎಂಬ ಆಶಯವನ್ನಿಟ್ಟುಕೊಂಡು, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಲೆ ಮತ್ತು ಸಂಸ್ಕøತಿ, ಪೌರಾಣಿಕ, ಪಾತ್ರಗಳ ಬಗ್ಗೆ ಪಾಲಕರು ವಿಶೇಷ ಆಸಕ್ತಿ ವಹಿಸಿ, ಆದರ್ಶ ಪ್ರಾಯವಾಗಿದ್ದಾರೆ ಎಂದರು. ಖಳನಾಯಕಿಯರ ಪಾತ್ರದ ಬಹುಮಾನ ವಿಜೇತರು ಹೆಚ್ಚಾಗಿದ್ದು, ಬೆಳೆವ ಸಿರಿ ಮೊಳಕೆಯಲ್ಲಿ "ಹೆಣ್ಮಕ್ಕಳೇ ಸ್ಟ್ರಾಂಗ್ ಗುರು" ಎಂದು ಹೆಮ್ಮೆಪಟ್ಟರು. ಇನ್ನೋರ್ವ ಅತಿಥಿ, ಮಜಾ ಭಾರತ ಖ್ಯಾತಿಯ ನಟ ಬಸವರಾಜ ಗುಡ್ಡಪ್ಪನವರ, ಮಾತನಾಡಿ ಈ ರೀತಿ ಆನ್ಲೈನ ಕಾರ್ಯಕ್ರಮಗಳನ್ನು ಸುದೀಶ ಇವೆಂಟ್ಸ, ಹಾಗೂ ಕಲಸ್ಪಂದನ ಸಂಸ್ಥೆಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಇದರಲ್ಲಿ ನಿರ್ಣಾಯಕರಾಗಿ, ರಾಘವೇಂದ್ರ ಕುಂದಗೋಳ, ಮಾರ್ತಾಂಡಪ್ಪ ಕತ್ತಿ ಕಾರ್ಯನಿರ್ವಹಿಸಿದರು.