ವೇಶ್ಯಾವಾಟಿಕೆ: ಮಹಿಳೆ ರಕ್ಷಣೆ, ಇಬ್ಬರ ಸೆರೆ

ಕಲಬುರಗಿ,ಜು.10-ನಗರದ ಹೀರಾಪುರ ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ರಕ್ಷಣೆ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿಸಿಬಿ ಘಟದಕ ಪಿಐ ದಿಲೀಪಕುಮಾರ ಬಿ.ಸಾಗರ್, ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ಯಲ್ಲಪ್ಪ, ಅಶೋಕ ಕಟಕೆ, ಶಿವಕುಮಾರ, ನಾಗರಾಜ, ಅನೀಲಕುಮಾರ ಮತ್ತು ಜ್ಯೋತಿ ಅವರು ದಾಳಿ ನಡೆಸಿ ಒಬ್ಬ ಮಹಿಳೆಯನ್ನು ರಕ್ಷಣೆ ಮಾಡಿ, ಬಸವನಗರದ ರಾಜೇಂದ್ರ ನಾಯ್ಕೋಡಿ ಮತ್ತು ಶಕ್ತಿ ನಗರದ ದೇವರಾಜ ಯಡಹಳ್ಳಿ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.