ವೇಶ್ಯಾವಾಟಿಕೆ: ನಾಲ್ವರ ಬಂಧನ

ಕಲಬುರಗಿ,ಆ.19-ನಗರದ ಅಡ್ವೊಕೇಟ್ ಕಾಲೋನಿಯ ಮನೆ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪಿಐ ಶಕೀಲ್ ಅಂಗಡಿ, ಸಿಬ್ಬಂದಿಗಳಾದ ಮೋಶೀನ್, ಭೋಗೇಶ, ಫಿರೋಜ್, ಸಂಗಣ್ಣ ಮತ್ತು ಕು.ಶಿಲ್ಪಾ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆಗಾಗಿ ತನ್ನ ಮನೆ ಬಳಸಲು ಅನುಮತಿ ನೀಡಿದ್ದ ರಾಜಕುಮಾರ ಕಾಳೆ, ಮಹಿಳೆಯರನ್ನು ಕರೆ ತರುತ್ತಿದ್ದ ರಾಧಾ ರೆಡ್ಡಿ, ವೇಶ್ಯಾವಾಟಕೆಯಲ್ಲಿ ತೊಡಗಲು ಬಂದಿದ್ದ ಅಜರ್ ನಿಯಾಜಾದ್ದೀನ್, ಮಣಿಕಂಠ ಸಿಂಗೆ ಎಂಬುವವರನ್ನು ಬಂಧಿಸಲಾಗಿದೆ.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.