ವೇಮನ ವಚನಗಳು ಸಮಾಜಕ್ಕೆ ದಾರಿದೀಪ : ಸಾಗರ

ಕಲಬುರಗಿ:ಜ.19: ಪ್ರತಿಯೊರು ವೈಚಾರಿಕತೆ ಅಳವಡಿಸಿಕೊಳ್ಳಬೇಕು, ನಿರಂತರ ಪ್ರಯತ್ನವಾದಿಗಳಾಗಬೇಕು, ಪ್ರಬಲ ಇಚ್ಛಾಶಕ್ತಿ ಸಾಧನೆಗೆ ಪೂರಕ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಸರಳತೆ, ಸಹಜತೆಯಂತಹ ಮುಂತಾದ ಗುಣಗಳು ಅಳವಡಿಸಿಕೊಳ್ಳಬೇಕು, ‘ಮಾನವೀಯತೆಯೇ ಧರ್ಮ, ಜೀವಾತ್ಮರಲ್ಲಿಯೇ ಪರಮಾತ್ಮರನ್ನು ಕಾಣಬೇಕು’ ಎಂಬ ಮಹಾಯೋಗಿ ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಪ್ರಾಂಶುಪಾಲ ಮಹ್ಮದ್ ಅಲ್ಲಾ ಉದ್ದೀನ ಸಾಗರ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋದೊಂದಿಗೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಮಹಾಯೋಗಿ ವೇಮನ್‍ರ 611ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ವೇಮನ್‍ರು ಶ್ರೇಷ್ಠ ಸಮಾಜ ಸುಧಾರಕರು, ತತ್ವಜ್ಞಾನಿಗಳು, ಚಿಂತಕರು, ಕವಿಗಳು, ಮಹಾನ ಯೋಗಿಗಳು. ಅವರು ಜನಸಾಮಾನ್ಯರ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಹುಮುಖ ವ್ಯಕ್ತಿತ್ವದ ಮಹಾನ ಚೇತನವಾಗಿದ್ದಾರೆ. ಸಮಾಜದಲ್ಲಿ ತುಂಬಿರುವ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅನಿಷ್ಠ ಪದ್ಧತಿಗಳ ವಿರುದ್ದ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿದ್ದಾರೂಡ ಬಿರಾದಾರ, ರಾಮಚಂದ್ರಪ್ಪ ಟಿ.ಹಕ್ಕಿ, ದೇವೇಂದ್ರಪ್ಪ ಬಡಿಗೇರ್, ಪ್ರ.ದ.ಸ ನೇಸರ ಎಂ.ಬೀಳಗಿಮಠ ಸೇರಿದಂತೆ ಮತ್ತಿತರರಿದ್ದರು.