ವೇಮನ್ ಜಯಂತಿ: 10 ರಂದು ಸಭೆ

ಬೀದರ್:ಜ.8: ಜ. 19 ರಂದು ನಡೆಯಲಿರುವ ಮಹಾಯೋಗಿ ವೇಮನ್ ಅವರ 609 ನೇ ಜಯಂತಿ ಪ್ರಯುಕ್ತ ನಗರದ ಹೇಮರೆಡ್ಡಿ ಮಲ್ಲಮ್ಮ ಮಂದಿರದಲ್ಲಿ ಜ. 10 ರಂದು ಬೆಳಿಗ್ಗೆ 9ಕ್ಕೆ ಪೂರ್ವಭಾವಿ ಸಿದ್ಧತಾ ಸಭೆ ಕರೆಯಲಾಗಿದೆ.

ರೆಡ್ಡಿ ಸಮಾಜ ಪದಾಧಿಕಾರಿಗಳು, ಮುಖಂಡರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡು ಸಲಹೆ, ಸೂಚನೆ ನೀಡಬೇಕು ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ಕೋರಿದ್ದಾರೆ.