ವೇಮನರ ಕಾವ್ಯದಲ್ಲಿ ಸತ್ವವಿದೆ:ಮಹಾಂತೇಶ ಕಲಾಲ

ಸೈದಾಪುರ:ಜ.20:ಯೋಗಿ ವೇಮನರು ಲೋಕಸಂಚಾರಿಯಾಗಿ ಜನರ ಬದುಕನ್ನು ಕಂಡು ಕವಿತೆಗಳನ್ನು ರಚಿಸಿದರು. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವವಿದೆ ಎಂದು ಪ್ರಾಂಶುಪಾಲ ಮಹಾಂತೇಶ ಕಲಾಲ್ ಹೇಳಿದರು.

ಸಮೀಪದ ಬಳಿಚಕ್ರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜನಸಾಮಾನ್ಯರ ಕವಿಯಾದ ವೇಮನ ಜಾತೀಯತೆ, ಅಂಧ ಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದು ಅಪೂರ್ವ ಸಮಾಜ ಸುಧಾರಕರಾದರು. ಅವರ ವಿಚಾರಧಾರೆಗಳನ್ನು ಜಯಂತಿಯ ಮೂಲಕ ತಿಳಿಯುವ ಪ್ರಯತ್ನ ಮಾಡೋಣ ಎಂದು ಹೇಳಿದರು. ಉಪನ್ಯಾಸಕರಾದ ಗೀತಾ ಕಡೇಚೂರು, ಬಂಡೆಮ್ಮ, ಮಾಳಪ್ಪ, ಪವಿತ್ರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.