ವೇದಿಕೆ ಸಿದ್ಧತೆ ಪರಿಶೀಲಿಸಿದ ಎಸಿ ಸಿದ್ಧರಾಮೇಶ್ವರ


ಹೊಸಪೇಟೆ (ವಿಜಯನಗರ),)ಜ.20:ಹಂಪಿ ಉತ್ಸವ ಆಚರಣೆ ಅಂಗವಾಗಿ ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಗುರುವಾರ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ನಿರ್ಮಿಸುತ್ತಿರುವ ವೇದಿಕೆಯನ್ನು ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಸಿದ್ಧರಾಮೇಶ್ವರ ಅವರು ಪರಿಶೀಲಿಸಿ ಉಳಿದ ವೇದಿಕೆಗಳ ನಿರ್ಮಾಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿಶ್ವಜೀತ್ ಮೆಹ್ತಾ ಅವರು ಸೇರಿದಂತೆ ಇತರರು ಇದ್ದರು.