ವೇದಿಕೆ ಮೇಲೆ ಸಿಕ್ಸ್‌ಪ್ಯಾಕ್ ತೋರಿಸಿದ ಸಲ್ಮಾನ್ ಖಾನ್

ಮುಂಬೈ,ಏ.೧೧-ಬಾಲಿವುಡ್ ಅಂಗಳದಲ್ಲಿ ಸಲ್ಮಾನ್ ಖಾನ್‌ಗೆ ಸಖತ್ ಬೇಡಿಕೆ ಇದೆ. ಅವರದ್ದೇ ಆದ ದೊಡ್ಡ ಫ್ಯಾನ್ ಬೇಸ್ ಇದೆ. ಹೀಗಿರುವಾಗ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಏ.೨೧ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸದ್ಯ ಚಿತ್ರದ ಟ್ರೈಲರ್‌ನಿಂದ ಸೌಂಡ್ ಮಾಡ್ತಿದೆ. ಟ್ರೈಲರ್ ನೋಡ್ತಿದ್ದಂತೆ ಸಲ್ಲು ಬಾಯ್ ಸಿಕ್ಸ್‌ಪ್ಯಾಕ್ ವಿಎಫ್‌ಎಕ್ಸ್ ಎಂದವರಿಗೆ ಸಲ್ಮಾನ್, ವೇದಿಕೆ ಮೇಲೆ ಶರ್ಟ್ ಬಿಚ್ಚಿ ತೋರಿಸಿದ್ದಾರೆ.
ಸಲ್ಮಾನ್ ಖಾನ್ ನಿರ್ಮಾಣದ ಸಿನಿಮಾದಲ್ಲಿ ಸಲ್ಲುಗೆ ಜೋಡಿಯಾಗಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ರಾಮ್ ಚರಣ್, ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಸಾಂಗ್ ಟ್ರೈಲರ್‌ನಿಂದ ಸಿನಿಮಾ ಧೂಳೆಬ್ಬಿಸುತ್ತಿದೆ. ಟ್ರೈಲರ್ ಝಲಕ್‌ನಲ್ಲಿ ಸಿಕ್ಸ್‌ಪ್ಯಾಕ್‌ನಲ್ಲಿ ಮಿಂಚಿದ್ದಾರೆ.
ಏಪ್ರಿಲ್ ೧೦ರಂದು Kisi Ka Bhai Kisi Ki Jaan ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಲ್ಮಾನ್ ಖಾನ್, ಚಿತ್ರದ ನಾಯಕಿ ಪೂಜಾ ಹೆಗ್ಡೆ ಮೊದಲಾದವರು ವೇದಿಕೆ ಏರಿದರು. ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್ ಪ್ಯಾಕ್ ಉದ್ದೇಶಿಸಿ ಕೆಲವರು ಇದನ್ನು ವಿಎಫ್‌ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಶ್ರಮವಹಿಸಿ ಮಾಡಿದ ದೇಹ ಎಂಬುದನ್ನು ಸಾಬೀತು ಮಾಡಿದ್ದಾರೆ.
ಸಲ್ಮಾನ್ ಖಾನ್‌ಗೆ ವಯಸ್ಸು ೫೭ ಆದರೂ ಫಿಟ್‌ನೆಸ್‌ನಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸಿನಿಮಾ ಶೂಟಿಂಗ್ ಮಧ್ಯೆ ಜಿಮ್, ವರ್ಕೌಟ್ ಅಂತಾ ದೇಹದ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಹಾಗಾಗಿ ಸಿನಿಮಾದಲ್ಲಿ ಸಲ್ಲು ಕಟ್ಟು ಮಸ್ತಾಗಿ ಕಾಣಿಸಿಕೊಂಡಿದ್ದಾರೆ.