ವೇದಶ್ರೀಗೆ ೮ ನೇ ರ್ಯಾಂಕ್

ದಾವಣಗೆರೆ. ಮಾ.೩೧; ಜಿ.ಎಂ.ಐ.ಟಿ ಯ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿಗೆ ವಿ ಟಿ ಯುನಿಂದ ರ‍್ಯಾಂಕ್ ಬಯೋಟೆಕ್ನಾಲಜಿ ವಿಭಾಗದ 2016 ಬ್ಯಾಚ್‌ನ ವಿದ್ಯಾರ್ಥಿನಿಯಾದ ವೇದಶ್ರೀ ಎನ್ ಡಿ ಇವರು ಬಿ. ಇ. ಬಯೋಟೆಕ್ನಾಲಜಿಯಲ್ಲಿ 8ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಇವರಿಗೆ ಎಪ್ರಿಲ್ 03,  ರಂದು ನಡೆಯುವ ವಿ ಟಿ ಯು 20ನೇ ಘಟಿಕೋತ್ಸವದಲ್ಲಿ ಬಂಗಾರದ ಪದಕವನ್ನು ಪ್ರಧಾನ ಮಾಡಲಾಗುತ್ತದೆ. ಇವರ ಈ ಸಾಧನೆಗೆ ಕಾಲೇಜಿನ ಚೇರ್ಮನ್  ಜಿ ಎಂ ಲಿಂಗರಾಜು, ಪ್ರಾಂಶುಪಾಲರಾದ ಡಾ. ವೈ. ವಿಜಯ ಕುಮಾರ್, ಆಢಳಿತ ಮಂಡಳಿ ಪ್ರತಿನಿಧಿ  ವೈ. ಯು. ಸುಭಾಶ್ಚಂದ್ರರವರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಗುರುಮೂರ್ತಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ