ವೇದಗಳ ಅಧ್ಯಾಯನದಿಂದ ಪರಮಾತ್ಮನ ಸಾನಿಧ್ಯ ಸಾಧ್ಯ


ಸಂಜೆವಾಣಿ ವಾರ್ತೆ
ಸಂಡೂರು:ಮೇ:13:   ಶಂಕರಾಚಾರ್ಯರು ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಶ್ಯತ್ವವನ್ನು ಸ್ವೀಕರಿಸಿದರು ಪರಿಣಾಮ ಅದಿ ಶಂಕರಾಚಾಯೃರು ಹಿಂದೂ ಧರ್ಮದ ಪ್ರಚಾರಕ್ಕಾಘಿ ದೇಶದ ವಿವಿಧ ಕಡೆಗಳಲ್ಲಿ 4 ಮಠಗಳನ್ನು ಸ್ಥಾಪಿಸಿದ್ದಾರೆ. ವೇದಗಳ ಮೂಲಕ ಪರಮಾತ್ಮನ ಸಾನಿಧ್ಯ ಎನ್ನುವುದನ್ನು ಸಾಬೀತು ಪಡಿಸಿದರಲ್ಲದೆ ಅವರ ಬದುಕಿನ 32 ವರ್ಷಗಳ ಜೀವಿತಾವಧಿಯಲ್ಲಿ ಅನೇಕ ಮಹಾನ್ ಗ್ರಂಥಗಳನ್ನು ರಚಿಸುವುದರ ಮೂಲಕ ಬ್ರಾಹ್ಮಣ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅಂದಿನ ದಿನಮಾನಗಳಲ್ಲಿ ವೇದಗಳ ಅಸ್ತಿತ್ವವನ್ನು ಅಲ್ಲಗೆಳೆಯುವ ಕೆಲ ಧರ್ಮದವರ ಪ್ರಭಾವದಿಂದ ಅವನತಿಯ ಅಂಚಿನಲ್ಲಿದ್ದ ಹಿಂದೂ ಧರ್ಮಕ್ಕೆ ಪುನಶ್ಚೇತನ ನೀಡುವುದರ ಮೂಲಕ ಬ್ರಾಹ್ಮಣ ಸಮಾಜದ ಸರ್ವ ಅಭಿವೃದ್ದಿಗೆ ಕಾರಣೀಪುರುಷರಾಗಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿ ಸಮಾಜದ ಹರಿಕಾರರಾದರು ಎಂದು ಬ್ರಾಹ್ಮಣ ಸಮಾಜದ ಮುಖಂಡ ಅರುಣ ಕರಮರಕರ ತಿಳಿಸಿದರು.
ಅವರು ಪಟ್ಟಣದ ಶಂಕರಮಠದಲ್ಲಿ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತೋತ್ಸವ ಸಂದರ್ಭದಲ್ಲಿ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಸಭೀಕರನ್ನು ಉದ್ದೇಶಿಸಿ ಮಾತನಾಡಿದರು. ಮಾತನಾಡುವ ಮೂಲಕ ಶಂಕರಾಚಾರ್ಯರ ಭಾವಚಿತ್ತಕ್ಕೆ ಕುಲಕರ್ಣಿ ಸತ್ಯನಾರಾಯಣರಾವ್ , ಸುರೇಶ್, ಹನುಮಂತಪ್ಪ, ತಾಮಪರ್ಣಿವೆಂಕಟೇಶ್, ಪದ್ಮಾವತಿ ಶ್ರೀನಿವಾಸ, ವೆಂಕಟೇಶ್, ಯಂಕಣ್ಣಜೋಷಿ, ವಿನಾಯಕ ಪ್ರಭಾಕರ ಭಟ್ಟ, ಜೆ. ಪ್ರಭಾಕರ ಭಟ್ಟ, ಬದರೀ ಪ್ರಸಾದ , ಕುಮಾರ ಕರಮರಕರ, ರವಿಕುಲಕರ್ಣಿ, ಆಶೋಕ ಕುಲಕರ್ಣಿ, ಇವರ ನೇತೃತ್ವದಲ್ಲಿ ಪುಷ್ಪನಮನ ಸಲ್ಲಿಸಿದರು. ಅವರು ಮುಂದುವರೆದು ಕೊಲ್ಲೂರಿಗೆ ಹೋಗುವ ಮಾರ್ಗದಲ್ಲಿ ನಟ್ಟಡವಿಯಲ್ಲಿ ಮಧ್ಯರಾತ್ರಿ ಸಮಯದಲ್ಲಿ ಭಯಂಕರ ರೂಪಿಣಿಯನ್ನು ಎದುರಿಸಿ ಆ ತಾಯಿಯನ್ನು ಶಾಂತಗೊಳಿಸಿ ಉಗ್ರರೂಪ ತಾಯಿಯನ್ನು ಶಾಂತಗೊಳಿಸಿ ಅಲ್ಲಿಯೇ ಕೆಲದಿನ ವಾಸಮಾಡಿ ಮುಂದೆ ಬೇರೊಂದು ಗ್ರಾಮಕ್ಕೆ ಪಯಣಿಸಿದ ಕೀರ್ತಿ ಶಂಕರಾಚಾಯೃರದು ಎಂದು ತಿಳಿಸಿದರು.