ವೇತನ ಹೆಚ್ಚಳಕ್ಕೆ ಅತಿಥಿ ಶಿಕ್ಷಕರ ಒತ್ತಾಯ

ರಾಯಚೂರು, ನ.೨೧, ಅತಿಥಿ ಶಿಕ್ಷಕರ ವೇತನ ಹೆಚ್ಚಳ, ಮತ್ತು ಸೇವಾ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಯಲ್ಲಿ ಒಟ್ಟು ೩೨.೪೫೯ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಅತಿ ಕಡಿಮೆ ಗೌರವಧನಕ್ಕೆ ಕರ್ತವ್ಯ ನಿರ್ವಹಿಸುತ್ತಾ ಅನೇಕ ಸಮಸ್ಯೆಗಳನ್ನು ಎದುರುಸುತ್ತಾ ಬಂದಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು. ಪ್ರಸ್ತುತ ನೀಡಿತ್ತಿರುವ ೧೦ ಸಾವಿರ ಗೌರವಧನ ಕುಟುಂಬದ ನಿರ್ವಹಣೆ ಆಧಾರವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾನ ವೇತನ ನೀಡಬೇಕು ಎಂದು ಮನವಿ ಮಾಡಿದರು.
ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು.
ಪ್ರತಿ ತಿಂಗಳು ೧ನೇ ತಾರಿಕೆಗೆ ವೇತನ ಜಮ ಮಾಡಬೇಕು.ಪ್ರತಿ ವರ್ಷ ಅತಿಥಿ ಶಿಕಷಕರ ನೇಮಕಾತಿ ಪ್ರಕ್ರಿಯಯಲ್ಲಿ ಅತಿಥಿ ಶಿಕ್ಷಕರ ಹಿಂದಿನ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಅಧ್ಯತೆ ನೀಡಬೇಕು.ಶಿಕ್ಷಕರ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ ೧ ವರ್ಷಕ್ಕೆ ೫% ಕೃಪಂಕ ನೀಡಬೇಕು.ಅತಿಥಿ ಶಿಕ್ಷಕರಿಗೆ ಕನಿಷ್ಠ ೨೫೦೦೦ ರೂ ಗೌರವಧನ ನೀಡಬೇಕು.ಖಾಯಂ ಶಿಕ್ಷಕರಿಗೆ ಸರಿಸಮನವಾಗಿ ಕೆಲಸ ಮಾಡುತ್ತಿರುವ ನಮಗೂ ಅಕ್ಟೋಬರ ತಿಂಗಳಲ್ಲಿ ಪೂರ್ಣ ವೇತನ ನೀಡಬೇಕು.ಪ್ರತಿ ಶೈಕ್ಷಣಿಕ ವರ್ಷ ಜೂನ ೧ ರಿಂದ ಏಪ್ರಿಲ್ ೧೦ ರವರೆಗೂ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಮ್ಮನ್ನು ಮಾರ್ಚ ೩೧ ಕ್ಕೆ ಬಿಡುಗಡೆಗೊಳಿಸದೇ ಏಪ್ರಿಲ್ ೧೦ರ ವರೆಗೂ ವಿಸ್ತರಿಸಬೇಕು.ಅತಿಥಿ ಶಿಕ್ಷಕರಿಗೆ ಆರ್ಥಿಕ ಭದ್ರತೆಗಾಗಿ ಪಿ.ಎಫ್. ಮತ್ತು ಇ.ಎಸ್.ಐ. ಗಳನ್ನು ನೀಡಬೇಕು. ಶಿಕ್ಷಕರ ನೇಮಕಾತಿಯಲ್ಲಿ ಶೇ ೫% ರಷ್ಟು ಹುದ್ದೆಗಳನ್ನು ಅತಿಥಿ ಶಿಕ್ಷಕರಿಗೆ ಮಿಸಲಿಡಬೇಕು.ಅತಿಥಿ ಶಿಕ್ಷಕರು ಕರ್ತವ್ಯದ ವೇಳೆ ಜೀವಕ್ಕೆ ಹಾನಿ ಉಂಟದಾಗ ಸರಕಾರದಿಂದ ಪರಿಹಾರ ಧನ ನೀಡಬೇಕು. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು.
ಈ ಸಂದರ್ಭದಲ್ಲಿ ಮಂಜುನಾಥ, ಜಿ. ಕೆ ನಾಗರಾಜ, ಶರಣಬಸವ, ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಉಪಸ್ಥಿತರಿದ್ದರು.