
ಮಾಲೂರು,ಮಾ.೧೨-ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪ್ರತಿ ತಿಂಗಳು ೧ನೇ ತಾರೀಖಿಗೆ ಆಗಬೇಕಾಗಿತ್ತು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಂದನೇ ತಾರೀಕಿನಂದೆ ವೇತನವಾಗಿದ್ದರೂ ಸಹ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೇತನವು ೧೦ ದಿನಗಳಾದರೂ ಶಿಕ್ಷಕರ ಖಾತೆಗೆ ಜಮಾ ಆಗಿರುವುದಿಲ್ಲ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಕೆಲವು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕಚೇರಿಯ ಸಿಬ್ಬಂದಿಯ ನಿರ್ಲಕ್ಷದಿಂದ ವೇತನ ವಿಳಂಬವಾಗುತ್ತಿದೆ ಎಂದು ದೂರಿದ್ದಾರೆ.
ತಾಲೂಕಿನಲ್ಲಿ ೩೧೪ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ೭೯೧ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ಶಿಕ್ಷಕರ ವೇತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರತಿ ತಿಂಗಳ ಒಂದಕ್ಕೆ ವೇತನದ ಬಿಲ್ಲಾಗಿ ಶಿಕ್ಷಕರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿತ್ತು, ಆದರೆ ಫೆಬ್ರವರಿ ತಿಂಗಳು ಮುಗಿದು ಮಾರ್ಚ್ ೧೦ ಆದರೂ ವೇತನ ವಿಳಂಬವಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಆದಾಯ ತೆರಿಗೆ ನಮೂನೆಗಳ ಕಟಾವು ಪರಿಶೀಲನೆ ವಿಳಂಭವಾಗಿರುವುದರಿಂದ ಶಿಕ್ಷಕರ ವೇತನ ವಿಳಂಬವಾಗುತ್ತಿದೆ ಆದಷ್ಟು ಬೇಗ ಇದನ್ನು ಸರಿಪಡಿಸಿ ಶಿಕ್ಷಕರಿಗೆ ವೇತನ ಮಾಡುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ.