ವೇತನ ಬಿಡುಗಡೆಗೆ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ಆಗ್ರಹ

ವಿಜಯಪುರ,ಜ.30:ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ 4 ತಿಂಗಳ ವೇತನ ನೀಡದೆ ಹಾಗೂ ಪಿಎಫ್ ಮತ್ತು ಇಎಸ್‍ಐ ಸರಿಯಾಗಿ ಕಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಹಾಪೌರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕÀ ಲಕ್ಷ್ಮಣ ಹಂದ್ರಾಳ ಮಾತನಾಡಿ, ಜೇಸ್ಕೋ ಕಂಪನಿ (ಗುತ್ತಿಗೆದಾರರು ಗಣೇಶ ಶಂಕರ ಬೆಂಗಳೂರು) ಜನೇವರಿ 2023 ರಿಂದ ಡಿಸೆಂಬರ-2023 ಇವರ ಗುತ್ತಿಗೆ ಅವಧಿ ಪೂರ್ಣಗೊಂಡರೂ 04 ತಿಂಗಳಿಂದ ಸರಿಯಾಗಿ ವೇತನ ಹಾಗೂ ಪಿ.ಎಫ್. ಮತ್ತು ಇ.ಎಸ್.ಐ ಕಟ್ಟದೆ ಇರುವದರಿಂದ ತನಿಖೆಗೆ ಒಳಪಡಿಸಿ ಆವರ ವಿರುದ್ಧ ಕ್ರಮ ಜರುಗಿಸಿ ಅವರ ಏಜೈನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ವರ್ಷ ಜನೇವರಿ-2024 ರಿಂದ ಆದರ್ಶ ಎಂಟರ್‍ಪ್ರೈಜಿನ್ ಹುಬ್ಬಳಿ ಇವರು ಕಾರ್ಮಿಕರಿಗೆ ಅನಾವ್ಯಶಕ ಕಿರುಕುಳ ಕೊಡುವ ಉದ್ದೇಶದಿಂದ 100 ರೂಪಾಯಿ ಖಾಲಿ ಬಾಂಡ್ ಪೇಪರನಲ್ಲಿ ಸಹಿ ಮಾಡಿ ಕೊಡಬೇಕು ಕೊಡದೇ ಇದ್ದರೆ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಮಾನಸಿಕವಾಗಿ ಹೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಇದ್ದನ್ನು ನಿಲ್ಲಿಸಬೇಕು. ಜೇಸ್ಕೋ ಕಂಪನಿ ಗುತ್ತಿಗೆದಾರರು ಮೊದಲು ಕಾರ್ಮಿಕರು ಕೆಲಸ ಮಾಡುವ ವಾರ್ಡನಲ್ಲಿಯೇ ಹಾಜರಾತಿ ಸ್ಥಳಗಳನ್ನು ಮಾಡಿದರು. ಆದರೆ ಈಗ ಇರುವ ಆದರ್ಶ ಎಂಟರ್‍ಪ್ರೈಜಿಸ್ ಹುಬ್ಬಳಿ ಗುತ್ತಿಗೆದಾರರು ಕಾರ್ಮಿಕರು ಕೆಲಸ ಮಾಡುವ ಸ್ಥಳದಿಂದ ಸುಮಾರ 06 ರಿಂದ 07 ಕಿಲೋಮಿಟರ್ ಆಗುವ ಜಲನಗರ ಆಫಿಸ್ ಹತ್ತಿರ ಬಂದು ಹಾಜರಾತಿ ಕೊಟ್ಟು ಪುನಃ 06 ರಿಂದ 07 ಕಿಲೋಮೀಟರ್ ಅವರ ವಾರ್ಡಗಳಿಗೆ ಕೆಲಸ ಮಾಡಲು ಹೊಗಬೇಕು ಎಂದು ಹೇಳುತ್ತಾರೆ. ಯಾರಾದರೂ ಹಾಜರಾತಿಗೆ ಬರದೆ ಇದ್ದರೆ ಅಂತಹ ಕಾರ್ಮಿಕರನ್ನು ಬೆದರಿಸುತ್ತಿದ್ದಾರೆ. ಅವರÀ ಮೇಲೆ ಕ್ರಮ ಜರುಗಿಸಬೇಕು. ಆದರ್ಶ ಎಂಟರ್‍ಪ್ರೈಜಿಸ್ ಹುಬ್ಬಳಿ ಗುತ್ತಿಗೆದಾರರು ಕಾರ್ಮಿಕರ ಹಾಜರಾತಿಯನ್ನು ವಲಯ ಕಛೇರಿ ಪ್ರಕಾರ ಅವರ ದುಡಿಯುವ ವಾರ್ಡನಲ್ಲಿ ಬಯೋಮೆಟ್ರಿಕ್ ಮಷಿನ್À ಕೂಡಿಸಿ ಹಾಜರಾತಿಯನ್ನು ತಗೆದುಕೊಳ್ಳಬೇಕು. ಅದೇ ರೀತಿಯಾಗಿ ಗುತ್ತಿಗೆದಾರು ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಉಪಹಾರ, ರಕ್ಷಣಾ ಸಲಕರಣೆಗಳು, ನೀಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಈ ಸಂಬಂಧ ಜ.17ರಂದು ಆಯುಕ್ತರಿಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಕ್ರಮವಿಲ್ಲ. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವದರ ಜೊತೆ ಸಂಘದ ಪಧಾದಿಕಾರಿಗಳ ಮತ್ತು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ. ಕೂಡಲೇ ಸಂಘದ ಪಧಾದಿಕಾರಿಗಳ ಸಭೆ ಕರೆದು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಬೆಳ್ಳುಂಡಗಿ, ದಯಾನಂದ ಅಲಿಯಾಬಾದ, ಲಕ್ಷ್ಮಣ ಅತಾಲಟ್ಟಿ, ಗುರಪ್ಪ ದಲಾಲ, ಜಿ.ಕೆ. ಚಿಮ್ಮಲಗಿ, ರವಿಚಂದ್ರ ಲೋನಾರಿ, ಗಣೇಶ ಚವ್ಹಾಣ, ಅಕ್ಷಯ ಉತ್ತರ, ಅನೀಲ ಮೇಲಿನಮನಿ, ಐ.ಎಂ. ಮೋಮಿನ, ಸಮೀರ ಶಿರೋಳ, ಯಲ್ಲಪ್ಪ ನಾಗಾರಾಳ, ಆಕಾಶ ಮಾನಕರ, ರಘು ಪುಕಾಳೆ, ಮೊಹ್ಮದ್ ರಫೀಕ, ಮನೋಜ ಭೋವಿ ಮುಂತಾದ ಕಾರ್ಮಿಕರು ಉಪಸ್ಥಿತರಿದ್ದರು.