
ದಾವಣಗೆರೆ.ಮಾ.೧೪: ವೇತನ ಪರಿಷ್ಕರಣೆ, ಪಿಂಚಣಿ ಮತ್ತು ಇತರೆ ಭತ್ಯೆಗಳ ಸೌಲಭ್ಯದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂ ನೌಕರರು ಅಽಕಾರಿಗಳು ಬೆಸ್ಕಾಂ ಅಽಕ್ಷಕರ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.ವಿದ್ಯುತ್ ಪ್ರಸರಣ ಮತ್ತು ಕಂಪನಿ ನೌಕರರು, ಅಽಕಾರಿಗಳು ವೇತನ ಪರಿಷ್ಕರಣೆಗೆ ೨೦೧೮ರ ಮಾ. ೨ ರಂದು ರಾಜ್ಯ ಕಾರ್ಮಿಕರ ಆಯುಕ್ತರ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡಿರುವ ಐದು ವರ್ಷದ ಒಪ್ಪಂದದ ಅವಽ ೨೦೨೨ ರ ಮಾ. ೩೧ಕ್ಕೆ ಮುಕ್ತಾಯವಾಗಿದೆ. ಒಪ್ಪಂದದ ಕಂಡಿಕೆ ೧೨ರ ಪ್ರಕಾರ ಎಲ್ಲ ನೌಕರರು, ಅಽಕಾರಿಗಳಿಗೆ ನ್ಯಾಯ ಬದ್ಧ ಮತ್ತು ಕಾನೂನಾತ್ಮಕವಾಗಿ ವೇತನ ಪರಿಷ್ಕರಣೆ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಒಪ್ಪಂದದ ಅವಽ ಮುಗಿದು ವರ್ಷವೇ ಕಳೆದರೂ ವೇತನ ಪರಿಷ್ಕರಣೆ, ಪಿಂಚಣಿ, ಇತರೆ ಭತ್ಯೆ ಸೌಲಭ್ಯ ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ವಿದ್ಯುತ್ ಪ್ರಸರಣ ಮತ್ತು ಕಂಪನಿ ನೌಕರರು, ಅಽಕಾರಿಗಳು ವೇತನ ಪರಿಷ್ಕರಣೆಗೆ ಸಂಬಂಽಸಿದಂತೆ ಅಽಕಾರಿ ಗಳನ್ನೊಳಗೊಂಡ ಸಮಿತಿಯು ನೌಕರರು ಮತ್ತು ಅಽಕಾರಿಗಳ ಬೇಡಿಕೆಯಂತೆ ಶೇ.೩೯.೬೦ಕ್ಕೆ ಬದಲಾಗಿ ಶೇ. ೩೦ ರಷ್ಟು ವೇತನ ಪರಿಷ್ಕರಣೆ, ಪಿಂಚಣಿ, ಇತರೆ ಭತ್ಯೆಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದಾಗ್ಯೂ ಆಡಳಿತ ವರ್ಗ ವೇ ರಚಿಸಿದ್ದ ಅಽಕಾರಿಗಳ ಸಮಿತಿಯ ಶಿಫಾರಸಿನ ಅನ್ವಯ ವೇತನ ಪರಿಷ್ಕರಣೆ ಮಾಡದೆ ಶೇ. ೨೨ ರಷ್ಟು ಹೆಚ್ಚಿಸಿದೆ. ವೇತನ ಪರಿಷ್ಕರಣೆಗೆ ಸಂಬಂಽಸಿದಂತೆ ಮಂಜೂರಾತಿ ಸಲ್ಲಿಸಿ ಐದು ತಿಂಗಳು ಕಳೆದರೂ ಈವರೆಗೆ ಜಾರಿಗೆ ಬಂದಿಲ್ಲ. ಸ್ವತಃ ಇಂಧನ ಸಚಿವರೇ ೨೦೨೨ರ ಮೇ ಅಂತ್ಯದೊಳಗೆ ಆದೇಶ ನೀಡಲಾಗುತ್ತದೆ ಎಂಬ ಭರವಸೆಯೂ ಕಾರ್ಯಗತವಾಗುತ್ತಿಲ್ಲ. ವೇತನ ಪರಿಷ್ಕರಣೆ, ಪಿಂಚಣಿ, ಇತರೆ ಭತ್ಯೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಮಾ. ೧೬ ರಂದು ಬೆಸ್ಕಾಂ ಮತ್ತು ವಿದ್ಯುತ್ ಪ್ರಸರಣ ನಿಗಮದ ಎಲ್ಲ ನೌಕರರು, ಅಽಕಾರಿಗಳು ಕೆಲಸ ಸ್ಥಗಿತಗೊಳಿಸಿ, ಹೋರಾಟಕ್ಕಿಳಿಯುವರು. ಸರ್ಕಾರ ಅದಕ್ಕೆ ಅವಕಾಶ ಕೊಡದೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ, ಆಡಳಿತ ವರ್ಗ ನೌಕರರು ಮತ್ತು ಅಽಕಾರಿಗಳ ವಿರೋಽ ನೀತಿ ಅನುಸರಿಸುತ್ತಿದೆ. ವೇತನ ಪರಿಷ್ಕರಣೆಯ ಬಗ್ಗೆ ಮಾಡಿಕೊಳ್ಳಲಾದ ಒಪ್ಪಂದಗಳ ಷರತ್ತುಗಳು ಮತ್ತು ವಿದ್ಯುಚ್ಛಕ್ತಿ ಸುಧಾರಣೆ ಸಂದರ್ಭದಲ್ಲಿ ಪರಸ್ಪರ ಒಪ್ಪಿ ಮಾಡಿಕೊಂಡಿರುವ ತ್ರಿಪಕ್ಷಿಯ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಮಾಡಲಾಗುತ್ತಿದೆ. ನಿಗಮದ ಮಂಡಳಿಯ ಸಭಾ ನಡಾವಳಿಯಂತೆ ಕೂಡಲೇ ವೇತನ ಪರಿಷ್ಕರಣೆ, ಪಿಂಚಣಿ ಮತ್ತು ಇತರೆ ಭತ್ಯೆಗಳ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಕೇಂದ್ರ ಸಮಿತಿಯ ಪರಶುರಾಮ್, ಸಂಜೀವ್ ಪಾಟೀಲ್, ಸುರೇಶ್, ಜಯಪ್ಪ, ವೀರಭದ್ರಪ್ಪ, ಡಿ.ಸಿ. ಕೊಟ್ರೇಶ್, ಸ್ಥಳೀಯ ಸಮಿತಿ ಅಧ್ಯಕ್ಷ ಬಸವರಾಜ್, ಸುಽರ್ ಇತರರು ಇದ್ದರು.