“ವೇತನಾನುದಾನಕ್ಕೆ” ಜು. 5 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ

ಅಥಣಿ :ಜು.1: 1995 ರ ನಂತರ ಪ್ರಾರಂಭವಾದ ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ವೇತನಾನುದಾನದ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಇದೇ ದಿ, 05 ಬುಧುವಾರ ರಂದು ಬೆಳಿಗ್ಗೆ: 09-30 ಗಂಟೆಯಿಂದ ಸಾಯಂಕಾಲ: 05-00 ಗಂಟೆಗೆ ವರೆಗೆ “ಬೆಂಗಳೂರಿನ ಪ್ರೀಡಂ ಪಾರ್ಕದಲ್ಲಿ” ಸರ್ಕಾರದ ಗಮನ ಸೆಳೆಯಲು, ಒಂದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಆದ್ದರಿಂದ ಅನುದಾನ ರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು, ಎಲ್ಲ ಸಿಬ್ಬಂದಿಯವರು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು, ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ.ಬಿ.ನದಾಫ ರವರು ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ ಮಾರುತಿ ಅಜ್ಜಾನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಯ್.ಎಸ್.ಬನ್ನಿಕೊಪ್ಪ, ಆರ್.ಎಂ.ಸನದಿ, ಪಿ.ಬಿ.ಗುಡೋಡಗಿ, ಹಾಗೂ ಅರುಣ ಬಿರಾದರ, ಎಸ್.ವಿ.ಹಿರೇಮಠ, ಎಂ.ಎನ್. ದೊಡವಾಡ, ಜಿ.ಆರ್. ಕಾಳಚರಂತಿಮಠ ಉಪಸ್ಥಿತರಿದ್ದರು.