ವೇಣುಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ

ಕೋಲಾರ,ನ,೬- ತಾಲ್ಲೂಕಿನ ಗರುಡನಹಳ್ಳಿ ಸುಮಾರು ೩೫೦ ವರ್ಷಗಳ ಹಳೆಯ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶ್ರೀ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠ ಶ್ರೀ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ವಿಶೇಷ ಪೂಜೆ ಮತ್ತು ಪುನಃ ಪ್ರತಿಷಪನೆ, ವಿಮಾನ ಗೋಪುರ ಮಹಾ ಕುಂಭಾಭಿಷಕ ಮಹೋತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಹಾಗೂ ಪ್ರವಚನ ನಡೆಸಿಕೊಟ್ಟರು.
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮುಖಂಡ ಎಂ.ಚಂದ್ರಪ್ರಕಾಶ್ ಹಾಗೂ ಸಿ.ಸುಜಾತ ದಂಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಪಾದಪೂಜೆ ನೆರವೇರಿಸಿದರು.
ದೇವಾಲಯದ ಆವರಣದಲ್ಲಿ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲ ಸ್ವಾಮಿ ಕಲ್ಯಾಣೋತ್ಸವ ಹಾಗೂ ಶ್ರೀ ಕ್ಷೇತ್ರ ಕೈವಾರದ ”ನಾಧಾಸುಧಾಸ”ಯಿಂದ ಬುರ್ರ್‍ಅಕಥ, ಪಂಡರಿಪೂಜೆ, ಹಾಗೂ ನಾಟ್ಯಾಂಜಲಿ ನೃತ್ಯ ಕಲಾ ಅಕಾಡೆಮಿಯ ಬಾಲ ಕಲಾವಿದರಿಂದ ’ದಶಾವತಾರ’ ಹಾಗೂ ಶ್ರೀ ಕೃಷನ ಲೀಲೆಗಳ ಕುರಿತು ಭರತನಾಟ್ಯ ಪ್ರದರ್ಶನ ನಡೆಯಿತು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಿಇಓ ಪುಂಡಲೀಕ ಎಲ್.ಸಾಧುರೇ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸೂಲೂರು ಗ್ರಾಪಂ ಅಧ್ಯಕ್ಷ ಪಿ.ಸುರೇಶ್, ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಮುನಿರಾಜು, ಮುಖಂಡರಾದ ಕುರಿಗಳ ರಮೇಶ್, ತಲಗುಂದ ಟಿ.ಎಂ.ನಾರಾಯಣಸ್ವಾಮಿ, ವಿಮಲ ಸೂರ್ಯನಾರಾಯಣ ಇದ್ದರು.