ವೇಣಿ ವೀರಾಪುರ ಬಳಿ ಬಸ್ ನಿಲುಗಡೆಗೆ ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.04: ತಾಲೂಕಿನ ವೇಣಿ ವೀರಾಪುರ ಗ್ರಾಮದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮದ ಬಳಿ ಬಸ್ಸುಗಳ ನಿಲುಗಡೆಗೆ ಒತ್ತಾಯಿಸಲಾಗಿದೆ.
ಎಐಡಿವೈಓ ಯುವಜನ ಸಂಘಟನೆಯ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ವೇಣಿ ವೀರಾಪುರದ ಬಳಿ ಬಸ್ ನಿಲುಗಡೆ ಇಲ್ಲದಂತಾಗಿದೆ ಹಾಗಾಗಿ ಪ್ರತಿನಿತ್ಯ  ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತಡವಾಗಿ ಹೋಗುವಂತಾಗಿದೆ. ಈ ಹಿಂದೆ ಎಷ್ಟು ಬಾರಿ ಮನವಿ ಪತ್ರ ನೀಡಿದರು ಪ್ರಯೋಜನವಾಗಿಲ್ಲ. ಇದೇ ತಿಂಗಳು 13 ಕ್ಕೆ ಪರೀಕ್ಷೆಗಳು ಪ್ರಾರಂಭವಾಗಲಿವೆ, ಹಾಗಾಗಿ ಕುಡುತಿನಿ-ಬಳ್ಳಾರಿ ಮಾರ್ಗವಾಗಿ ಬರುವ ಹೊಸಪೇಟೆ ವಿಭಾಗದ ಬಸ್ಸುಗಳು ಬೆಳಗ್ಗೆ 7ರಿಂದ ಹತ್ತು ಗಂಟೆ ಒಳಗಡೆ ಬರುವ ಎಲ್ಲ ಬಸ್ಸುಗಳನ್ನು ವೇಣಿ ವೀರಾಪುರದ ಬಳಿ ನಿಲ್ಲಿಸುವಂತೆ AIDYO ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೇಮಕಲ್, ಉಮೇಶ. ಎಸ್, ಗ್ರಾಮದ ವಿದ್ಯಾರ್ಥಿಗಳಾದ ಮಣಿಕಂಠ, ಶಿವಪ್ರಸಾದ, ಹುಸೇನ್ ಸಾಬ್, ಪ್ರೀತಮ್ ನವೀನ್, ಸತೀಶ್, ರವಿತೇಜ ಇದ್ದರು.