ವೆಲೆನ್ಸಿಯಾ ದ್ವಿಗೋಲುಗಳ ಸಾಧನೆ: ಈಕ್ವೆಡಾರ್ ಶುಭಾರಂಭ

ಅಲ್ ಬೈತ್ (ಕತಾರ್), ನ.೨೧- ಪ್ರಥಮಾರ್ಧದಲ್ಲಿ ಎನ್ನೆರ್ ವೆಲೆನ್ಸಿಯಾ ದಾಖಲಿಸಿದ ಆಕರ್ಷಕ ಎರಡು ಗೋಲ್‌ಗಳ ನೆರವಿನಿಂದ ಇಲ್ಲಿನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಕತಾರ್ ವಿರುದ್ಧ ಫಿಫಾ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಈಕ್ವೆಡಾರ್ ೨-೦ ಅಂತರದಲ್ಲಿ ಗೆಲುವು ಸಾಧಿಸಿ, ಶುಭಾರಂಭ ಮಾಡಿದೆ.


?ಎ? ಗ್ರೂಪ್‌ನ ಮೊದಲ ಹಾಗೂ ಉದ್ಘಾಟನಾ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಹೋರಾಟ ನಡೆಸಿದವು. ಮುಖ್ಯವಾಗಿ ಇದು ಕತಾರ್ ಪಾಲಿಗೆ ಚೊಚ್ಚಲ ವಿಶ್ವಕಪ್ ಪಂದ್ಯವೆನ್ನುವುದು ವಿಶೇಷ. ಆದರೂ ಆರಂಭಿಕ ಹಂತದಲ್ಲಿ ಎರಡೂ ತಂಡಗಳು ಉತ್ತಮ ಹೋರಾಟ ನಡೆಸಿದವು. ಈ ವೇಳೆ ಮೊದಲಾರ್ಧದ ೧೬ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಲಭಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ವೆಲೆನ್ಸಿಯಾ ಆಕರ್ಷಕ ಗೋಲು ದಾಖಲಿಸಿ, ಪಂದ್ಯದಲ್ಲಿ ಈಕ್ವೆಡಾರ್‌ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಅದೂ ಅಲ್ಲದೆ ೩೧ನೇ ನಿಮಿಷದಲ್ಲಿ ಮತ್ತೊಮ್ಮೆ ಕಲಾತ್ಮಕ ಆಟ ಪ್ರದರ್ಶಿಸಿದ ವೆಲೆನ್ಸಿಯಾ ಮತ್ತೊಂದು ಗೋಲು ದಾಖಲಿಸಿ, ಮುನ್ನಡೆಯನ್ನು ೨-೦ಗೆ ಏರಿಸಿದರು. ಅಂತಿಮವಾಗಿ ಮೊದಲಾರ್ಧದಲ್ಲಿ ಈಕ್ವೆಡಾರ್ ೨-೦ ಅಂತರದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಈಕ್ವೆಡಾರ್ ಹೋರಾಟಕಾರಿ ಪ್ರದರ್ಶನ ನೀಡಿದರೂ ಗೋಲು ದಾಖಲಿಸಿಲು ಸಾಧ್ಯವಾಗಲಿಲ್ಲ. ಅಲ್ಲದೆ ಕತಾರ್ ಕೂಡ ಹೋರಾಟಕಾರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಎರಡೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಿಗದಿತ ಸಮಯ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪಂದ್ಯವನ್ನು ಈಕ್ವೆಡಾರ್ ೨-೦ ಅಂತರದಲ್ಲಿ ಗೆದ್ದು, ಟೂರ್ನಿಗೆ ಶುಭಾರಂಭ ಮಾಡಿತು.