ವೆಬ್ ಸರಣಿಯಲ್ಲಿ ಮದರ್ ತೆರೇಸಾ

ಸಮಾಜಸೇವೆಗೆ ಬದುಕು ಮೀಸಲಿಟ್ಟ ಮದರ್ ತೆರೇಸಾ ಜೀವನ ಚರಿತ್ರೆ ವೆಬ್ ಸರಣಿಯಲ್ಲಿ ಮೂಡಿಬರಲಿದೆ.  ಚಿತ್ರಕಥೆಗಾರ ಜಾನ್ ಪಾಲ್ ಪುತ್ತುಸ್ಸೆರಿ, ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್ ಜತೆಗೂಡಿ ವೆಬ್ ಸೀರೀಸ್ ಮಾಡುತ್ತಿದ್ದಾರೆ.

ಹಿಂದಿ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಪ್ಯಾನ್ ಇಂಡಿಯಾ ವೆಬ್ ಸೀರೀಸ್  ಸುಮಾರು 30 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಮಲಯಾಳಂ ನಿರ್ಮಾಪಕ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವೆಬ್ ಸರಣಿಯಲ್ಲಿ ಹಿರಿಯನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಪಿ. ಚಂದ್ರಕುಮಾರ್ ಮತನಾಡಿ ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಹಾಗು ಮದರ್ ತೆರೇಸಾ  ಅವರು ಎಲ್ಲೆಲ್ಲಿ ಹೋಗಿದ್ದರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ ಎಂದರು

ರೋಮ್. ಜೆರುಸಲೆನಿಯಂ, ಟೆಥ್‍ಲೆಹೆಮ್, ಮ್ಯಾಸಿಡೋನಿಯಾ. ಯುಕೆ. ಮತ್ತು ಇಟಲಿಯಂತಹ  ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ ಎಂದು ವಿವರ ನೀಡಿದರು

ಡಾರ್ಜಿರ್ಲಿಂಗ್ ನಲ್ಲಿ ಶಿಕ್ಷಕರಾಗಿ ಹೆಚ್ಚು ಕಾಲ ಕಳೆದಿದ್ದಾರೆ. ಅವರ ಬಗ್ಗೆ ಸಾಕಷ್ಟು ಕಾಂಟ್ರವರ್ಸಿ ಇದ್ದು, ಅದನ್ನೆಲ್ಲ ಈ  ಕಥೆಯಲ್ಲಿ ತಂದಿದ್ದೇವೆ. ಪತ್ರಕರ್ತೆಯ ದೃಷ್ಠಿಯಲ್ಲಿ ವೆಬ್ ಸೀರೀಸ್ ಮೂಡಿ ಬರಲಿದೆ ಎಂದರು.

ನಿರ್ಮಾಪಕ ಚಂದ್ರಶೇಖರ್ ಮಾತನಾಡಿ ಕನ್ನಡದಲ್ಲಿ ಮೊದಲಬಾರಿಗೆ ಮಾಡುತ್ತಿದ್ದೇವೆ. ಮದರ್ ತೆರೇಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ಮೂರು ಸೀಜನ್ ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ತೆರೇಸಾ ಅವರ  ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ ಎಂದರು. ಸಾಫಿ ಕೌರ್, ಅನಿತಾ ಮೆನನ್, ತನಿಮಾ ಮೆನನ್ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು