ವೆಟ್‍ಲಿಪ್ಟಿಂಗ್ ರಾಜ್ಯಮಟ್ಟಕ್ಕೆ ಆಯ್ಕೆ

ವಿಜಯಪುರ, ಡಿ.5-ಬೆಂಗಳೂರಿನ ಕಂಠಿರವ ಸ್ಟೇಡಿಯಂನಲ್ಲಿ ದಿನಾಂಕ 18-12-2021 ರಂದು ಜರುಗಲಿರುವ ರಾಜ್ಯಮಟ್ಟದ ವೇಟ್‍ಲಿಪ್ಟಿಂಗ್ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಸರಕಾರಿ ಪದವಿಪೂರ್ವ ಸರಕಾರಿ ಹೆಣ್ಣು ಮಕ್ಕಳ ಕಾಲೇಜಿನಿಂದ ಸುಶ್ಮಿತಾ ಶ್ರೀಶೈಲ ವಸ್ತ್ರದ ಇವಳು ವೆಟ್‍ಲಿಪ್ಟಿಂಗ್‍ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿಜಯಪುರ ಜಿಲ್ಲಾ ವೆಟ್‍ಲಿಪ್ಟಿಂಗ್ ಅಸೋಶಿಯನ ಅಧ್ಯಕ್ಷರಾದ ದಾದಾಸಾಹೇಬ ಬಾಗಾಯತ, ಕಾರ್ಯದರ್ಶಿ ಚಂದ್ರಕಾಂತ ಎಂ. ತಾರನಾಳ ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.