ವೆಜ್ ಸಿಜ್ಲರ್

ಬೇಕಾಗುವ ಸಾಮಗ್ರಿಗಳು

 • *ಎಲೆಕೋಸು – ೧
  *ಕ್ಯಾರೆಟ್ – ೨
  *ಬೀನ್ಸ್ – ೨
  *ದಪ್ಪ ಮೆಣಸಿನಕಾಯಿ -೨
  *ಟ್ರೋಕೋರಿ – ೨
  *ನೂಡಲ್ಸ್ – ೧ ಪ್ಯಾಕೆಟ್
  *ಅನ್ನ – ಕಾಲು ಭಾಗ
  *ಸೋಯಾಸಾಸ್ – ೩ ಚಮಚ
  *ಟೊಮೆಟೊ ಸಾಸ್ – ೩ ಚಮಚ
  *ರೆಡ್ ಚಿಲ್ಲಿ ಸಾಸ್
  *ಕಾರ್ನ್‌ಪ್ಲೋರ್
  *ಬಿಳಿಕಾಳು ಮೆಣಸು – ೫
  *ಬೆಣ್ಣೆ – ೪ ಚಮಚ
  *ಶುಂಠಿ
  *ಬೆಳುಳ್ಳಿ
  *ಹಸಿರು ಮೆಣಸಿನಕಾಯಿ –
  *ಉಪ್ಪು –
  *ಎಣ್ಣೆ –
  *ನೀರು-
 • ಮಾಡುವ ವಿಧಾನ :

ಸಿಜ್ಲರ್‌ನ್ನು ಒಲೆ ಮೇಲೆ ಕಾಯಲು ಇಡಿ. ಪ್ಯಾನ್‌ಗೆ ಎಣ್ಣೆ ಹಾಕಿ. ಕಾದ ಮೇಲೆ ಬೆಳುಳ್ಳಿ, ದಪ್ಪ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಅನ್ನ ಹಾಕಿ ಮಿಕ್ಸ್ ಮಾಡಿ. ನಂತರ ಉಪ್ಪು , ಬಿಳಿ ಕಾಳು ಮೆಣಸಿನಪುಡಿ ಹಾಕಿ, ಸ್ವಲ ಹುರಿದು ತೆಗೆದುದಿಟ್ಟು ಕೊಳ್ಳಿ. ಪ್ಯಾನ್‌ಗೆ ಬೆಣ್ಣೆ ಹಾಕಿ, ಕರಗಿದ ಮೇಲೆ ಬೆಳುಳ್ಳಿ, ಶುಂಠಿ , ದಪ್ಪ ಮೆಣಸಿನಕಾಯಿ, ಉದ್ದಕ್ಕೆ ಕಟ್ ಮಾಡಿದ ಕ್ಯಾರೆಟ್, ಬೀನ್ಸ್ , ಟ್ರೋಕೋರಿ, ಉಪ್ಪು, ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಪ್ಯಾನ್‌ಗೆ ಮತ್ತೆ ಬೆಣ್ಣೆ ಹಾಕಿ, ಬೆಳುಳ್ಳಿ , ಶುಂಠಿ, ಹಸಿ ಮೆಣಸಿನಕಾಯಿ,ಸೋಯಾಸಾಸ್ , ಟೊಮೆಟೊ ಸಾಸ್, ರೆಡ್ ಚಿಲ್ಲಿ ಸಾಸ್ ಹಾಕಿ ಮಿಕ್ಸ್ ಮಾಡಿ. ಮೆಣಸಿನಪುಡಿ, ಕಾರ್ನ್‌ಫ್ಲೋರ್, ನೀರಿನ ಮಿಶ್ರಣ ಹಾಕಿ ಕಲಸಿ ಇದಕ್ಕೆ ಈರುಳ್ಳಿ ಹಾಕಿ. ಸಿಜ್ಲರ್ ಸಾಸ್‌ಗಳನ್ನು ಸೇರಿಸಿ ಕೊಳ್ಳಿ. ನಂತರ ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ನೂಡಲ್ಸ್ ಹಾಕಿ ಕೆಂಪಗೆ ಕರೆದು ರೆಡಿ ಮಾಡಿಕೊಳ್ಳಿ. ಸಿಜ್ಲರ್ ಪ್ಲೇಟ್ ಒಲೆ ಮೇಲಿಟ್ಟು ಚೆನ್ನಾಗಿ ಕಾಯಿಸಿ ಅದರ ಮೇಲೆ ಎಲೆಗಳನ್ನು ಹರಡಿ ಮಾಡಿಟ್ಟು ಕೊಂಡಿರುವ ಅನ್ನ, ಹುರಿದ ತರಕಾರಿ, ಫೈಡ್ ನೂಡಲ್ಸ್ ಹಾಕಿ, ತಯಾರಿಸಿದ ಸಾಸ್ ಹಾಕಿ ಸಿಜ್ಲರ್ ಪ್ಲೇಟ್ ಮೇಲೆ ಬೆಣ್ಣೆ ಹಾಕಿ ಹೊಗೆಯಾಡುತ್ತಿರುವ ಹಾಗೆಯೇ ತಿನ್ನಲು ಕೊಡಿ.