ವೆಜ್ ಪಲಾವ್ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ: ಒಂದು ಲೋಟ
ಬೀನ್ಸ್ : ಐವತ್ತು ಗ್ರಾಂ
ಬಟಾಣಿ : ಐವತ್ತು ಗ್ರಾಂ
ಕ್ಯಾಪ್ಸಿಕಮ್ : ಐವತ್ತು ಗ್ರಾಂ
ಹಸಿಮೆಣಸಿನಕಾಯಿ : ಆರು
ಚಕ್ಕೆ: ಒಂದು ಇಂಚು
ಲವಂಗ : ಆರು
ಏಲಕ್ಕಿ : ನಾಲ್ಕು
ಸೋಂಪು : ಎರಡು ಟೀ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಎಣ್ಣೆ: ನೂರು ಗ್ರಾಂ
ಮಾಡುವ ವಿಧಾನ :ಬಾಸುಮತಿ ಅಕ್ಕಿ ತೊಳೆದು ಮೂವತ್ತು ನಿಮಿಷ ನೆನೆಸಿ ಸೋರಿ ಹಾಕಿಡಿ. ತರಕಾರಿಗಳನ್ನು ಹೆಚ್ಚಿಡಿ. ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.
ಕುಕ್ಕರಿನಲ್ಲಿ ಎಣ್ಣೆ ಹಾಕಿ ಹೆಚ್ಚಿದ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ಮಸಾಲೆ ಪುಡಿ, ನೆನೆಸಿದ ಬಾಸುಮತಿ ಅಕ್ಕಿ ಹಾಕಿ ಸ್ವಲ್ಪ ಹುರಿದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎರಡು ಲೋಟ ನೀರು, ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲೆಸಿ. ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಆಗಾಗ ತಿರುಗಿಸಿಕೊಡುತ್ತಾ ಹತ್ತು ನಿಮಿಷ ಬೇಯಿಸಿದರೆ ರುಚಿಯಾದ ವೆಜ್ ಪಲಾವ್ ಸಿದ್ಧ!
ಮೊಸರು ಬಜ್ಜಿ ಮಾಡುವ ವಿಧಾನ : ಅರ್ಧ ಸೌತೆಕಾಯಿ ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಒಂದು ಟೋಮೇಟೋ ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಸೌತೆಕಾಯಿ, ಟೋಮೇಟೋ, ಎರಡು ಚಮಚ ಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು, ತಾಜಾ ಮೊಸರು ಅರ್ಧ ಬಟ್ಟಲು ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ ಮೊಸರು ಬಜ್ಜಿ ಸಿದ್ಧ!