ವೆಜ್ ಕಟ್ಲೆಟ್ (ವೆಜ್ ರೋಲ್)

ಬೇಕಾಗುವ ಪದಾರ್ಥಗಳು:

 • ಕಾಳುಮೆಣಸು – ಅರ್ಧ ಚಮಚ
 • ಬೆಳ್ಳುಳ್ಳಿ ತುಂಡುಗಳು – ೪ – ೬
 • ಹಸಿರು ಮತ್ತು ಕೆಂಪು ಮೆಣಸಿನಕಾಯಿ – ೪
 • ಶುಂಠಿ – ೨ ಇಂಚು
 • ಎಣ್ಣೆ – ೪ ಚಮಚ
 • ಸೋಂಪು – ೧ ಚಮಚ
 • ಬಟಾಣಿಕಾಳು – ಅರ್ಧ ಲೋಟ
 • ತುರಿದ ಆಲೂಗೆಡ್ಡೆ – ೧ ಲೋಟ
 • ಉಪ್ಪು, ಗರಂಮಸಾಲ, ನಿಂಬೆರಸ, ಕೊತ್ತಂಬರಿಸೊಪ್ಪು, ಬ್ರೆಡ್ ಕ್ರಮ್ಸ್ (ಪುಡಿ), ಮೈದಾಹಿಟ್ಟು, ಎಣ್ಣೆ (ಇವೆಲ್ಲವೂ) – ರುಚಿಗೆ ತಕ್ಕಷ್ಟು
  ವಿಧಾನ: ಕಾಳುಮೆಣಸು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿಯನ್ನು ಪೇಸ್ಟ್ ಮಾಡಿಕೊಳ್ಳಬೇಕು. ಎಣ್ಣೆಗೆ ಸೋಂಪು ಹಾಕಿ, ರುಬ್ಬಿದ ಪೇಸ್ಟ್ ಹಾಕಿ ಬಾಡಿಸಿ, ಉಪ್ಪು ಹಾಕಿ ಬೇಯಿಸಿದ ಬಟಾಣಿಕಾಳು, ತುರಿದ ಆಲೂ ಅಥವಾ ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆ, ಗರಂಮಸಾಲ ಹಾಕಿ ಬಾಡಿಸಿ ಇಳಿಸಿ, ನಿಂಬೆರಸ, ಕೊತ್ತಂಬರಿಸೊಪ್ಪು ಹಾಕಿ, ಗಟ್ಟಿ ಬರಲು ಬ್ರೆಡ್ ಕ್ರಮ್ಸ್ ಹಾಕಿ ಕಲೆಸಬಹುದು. ಇಲ್ಲವೇ ಫ್ರಿಡ್ಜ್‌ನಲ್ಲಿಡಬಹುದು. ಮೈದಾಹಿಟ್ಟಿಗೆ ನೀರುಹಾಕಿ ದೋಸೆಹಿಟ್ಟಿನ ಹದಕ್ಕೆ ಕಲೆಸಿ, ತಯಾರಾದ ಮಿಶ್ರಣವನ್ನು ಆಂಬೊಡೆ ಆಕಾರ ಮಾಡಿ, ಕಲೆಸಿದ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್ ಕ್ರಮ್ಸ್‌ನಲ್ಲಿ ಹೊರಳಿಸಿ, ಎಣ್ಣೆ ಹಾಕಿದ ತವಾ ಮೇಲೆ ಬೇಯಿಸಬಹುದು, ಇಲ್ಲವೇ ಎಣ್ಣೆಯಲ್ಲಿ ಕರಿಯಬಹುದು. ಮಸಾಲೆ ಮಿಶ್ರಣವನ್ನು ಉದ್ದ ರೋಲ್ ಮಾಡಿಯೂ ಕರಿಯಬಹುದು.