ವೆಜ್‌ ಚೀಸ್ ಸ್ಯಾಂಡ್‌ವಿಚ್

ಬೇಕಾಗುವ ಸಾಮಗ್ರಿಗಳು
1/4 ಕಪ್ ತುರಿದ ಕ್ಯಾರೆಟ್
1/4 ಕಪ್ ಕ್ಯಾಪ್ಸಿಕಂ
1/4 ಕಪ್‌ ಸ್ವೀಟ್‌ ಕಾರ್ನ್‌ (ಬೇಯಿಸಿದ್ದು)
1/4 ಕಪ್ ಈರುಳ್ಳಿ
ಟೊಮೆಟೊ
1 ಬೆಳ್ಳುಳ್ಳಿ ಚಿಕ್ಕದಾಗಿ (ಕತ್ತರಿಸಿದ್ದು)
1 ಹಸಿ ಮೆಣಸಿನಕಾಯಿ
1/4 ಚಮಚ ಕಾಳು ಮೆಣಸಿನ ಪುಡಿ
1/2 ಚಮಚ ಹರ್ಬ್ಸ್ (ಒರೆಗ್ನೋ, ಪಾರ್ಸ್ಲೆ)
ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು
6 ಬ್ರೆಡ್‌ ಪೀಸ್
2 ಚಮಚ ಬೆಣ್ಣೆ
1 ಕಪ್ ಚೀಸ್ (ತುರಿಯಿರಿ)
ಮಾಡುವ ವಿಧಾನ:
ಒಂದು ಬೌಲ್‌ ಗೆ ತುರಿದ ಕ್ಯಾರೆಟ್‌, ಕ್ಯಾಪ್ಸಿಕಂ, ಸ್ವೀಟ್‌ ಕಾರ್ನ್ ಮತ್ತು ಈರುಳ್ಳಿ, ಹರ್ಬ್ಸ್, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ತುರಿದ ಚೀಸ್‌ ಹಾಕಿ ಮಿಕ್ಸ್ ಮಾಡಿ. ಬೆಣ್ಣೆಯನ್ನು ಬ್ರೆಡ್‌ ಮೇಲೆ ಹರಡಿ. ಈಗ ಬೆಣ್ಣೆ ಹರಡಿದ ಬ್ರೆಡ್‌ ಮೇಲೆ ಮಿಕ್ಸ್ ಮಾಡಿಟ್ಟ ವೆಜ್‌-ಚೀಸ್‌ ಮಿಶ್ರಣ ಸ್ವಲ್ಪ ತೆಗೆದು ಹರಡಿ. ಮತ್ತೊಂದು ಬ್ರೆಡ್‌ನಿಂದ ಮುಚ್ಚಿ. ಈಗ ಸ್ಯಾಂಡ್‌ವಿಚ್‌ ಮೇಕರ್ ಅಥವಾ ಟೋಸ್ಟರ್‌ ಬಿಸಿ ಮಾಡಿ ಸ್ಯಾಂಡ್‌ ವಿಚ್‌ ಮಾಡಿ. ನೀವು ಇದನ್ನು ತವಾದಲ್ಲಿಯೂ ಮಾಡಬಹುದು. ತವಾ ಬಿಸಿ ಮಾಡಿ ಅದಕ್ಕೆ ತುಪ್ಪ ಸವರಿ ಬ್ರೆಡ್‌ನ ಎರಡೂ ಬದಿ ಬಿಸಿ ಮಾಡಿದರೆ ವೆಜ್‌ ಚೀಸ್‌ ಟೋಸ್ಟ್ ರೆಡಿ. ಇದನ್ನು ಬಿಸಿ-ಬಿಸಿ ಇರುವಾಗಲೇ ಟೊಮೆಟೊ ಸಾಸ್ ಜೊತೆ ಸರ್ವ್ ಮಾಡಿ. ಇದಕ್ಕೆ ಮೊಟ್ಟೆಯನ್ನು ಬೇಯಸಿ ಪುಡಿ-ಪುಡಿ ಮಾಡಿ ಸೇರಿಸಬಹುದು.