ವೆಜ್‌ಬಾಲ್ ಮಂಚೂರಿ

ಬೇಕಾಗುವ ಸಾಮಗ್ರಿಗಳು
*ಅಕ್ಕಿ ಹಿಟ್ಟು – ೧ ಕಪ್
*ದಪ್ಪ ಮೆಣಸಿನಕಾಯಿ- ೪ ಚಮಚ
*ಹೂ ಕೋಸು – ೪ ಚಮಚ
*ಕ್ಯಾರೆಟ್ – ೩ ಚಮಚ
*ಸೋಯಾ ಸಾಸ್ – ೨ ಚಮಚ
*ಪುದೀನ & ಕೊತ್ತಂಬರಿ ಸೊಪ್ಪಿನ ಪೇಸ್ಟ್ -೨ ಚಮಚ
*ಗೋಡಂಬಿ – ೫
*ಕೊತ್ತಂಬರಿ ಸೊಪ್ಪು –
*ಕಸೂರಿ ಮೇಥಿ – ೧/೨ ಚಮಚ
*ಈರುಳ್ಳಿ – ೧
*ಬೀನ್ಸ್ – ೨ ಚಮಚ
*ಗರಂ ಮಸಾಲ – ೧ ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಉಪ್ಪು – ಒಂದೂವರೆ ಚಮಚ
*ಎಣ್ಣೆ – ೫ ಚಮಚ
*ಕಾರ್ನ್ ಫ್ಲೋರ್- ೨ ಚಮಚ

ಮಾಡುವ ವಿಧಾನ :

ಸಣ್ಣಗೆ ಕತ್ತರಿಸಿದ ಹೂಕೋಸನ್ನು ಬೌಲ್‌ಗೆ ಹಾಕಿ. ಇದಕ್ಕೆ ಕ್ಯಾರೆಟ್, ಬೀನ್ಸ್, ಕೊತ್ತಂಬರಿಸೊಪ್ಪು, ಗೋಡಂಬಿ ಸೇರಿಸಿ, ಸೋಯಾಸಾಸ್, ಗರಂ ಮಸಾಲ, ಅಕ್ಕಿ ಹಿಟ್ಟು, ಕಾರ್ನ್‌ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿಕೊಂಡು ಚೆನ್ನಾಗಿ ಕಲಸಿ. ಈ ಮಿಶ್ರಣದ ಉಂಡೆಗಳನ್ನು ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿದಿಟ್ಟು ಕೊಳ್ಳಿ. ಪುದೀನ, ಕೊತ್ತಂಬರಿಸೊಪ್ಪಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ, ಕಾದ ನಂತರ ಕಸೂರಿ ಮೇಥಿ, ಹೆಚ್ಚಿದ ಈರುಳ್ಳಿ,ಉದ್ದಕ್ಕೆ ಕತ್ತರಿಸಿಕೊಂಡ ಮೆಣಸಿನಕಾಯಿಯನ್ನು ಕೆಂಪಾಗುವವರೆಗೆ ಫ್ರೈ ಮಾಡಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾಸಾಸ್, ಉದ್ದಕ್ಕೆ ಕತ್ತರಿಸಿದ ದಪ್ಪ ಮೆಣಸಿನಕಾಯಿ ಹಾಗೂ ಪುದೀನ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಇನ್ನಷ್ಟು ಬೇಯಿಸಿ. ಕರಿದಿಟ್ಟುಕೊಂಡ ಉಂಡೆಗಳನ್ನು ಈ ಮಿಶ್ರಣಕ್ಕೆ ಹಾಕಿ ಬೇಯಿಸಿದರೆ ರುಚಿಯಾದ ವೆಜ್‌ಬಾಲ್ ಮಂಚೂರಿ ರೆಡಿಯಾಗಿರುತ್ತದೆ