ವೆಜಿಟೇಬಲ್ ಬಾತ್

ಬೇಕಾಗುವ ಸಾಮಗ್ರಿಗಳು

*ಕ್ಯಾರೆಟ್ – ೧೦
*ಬೀನ್ಸ್ -೧೦
*ಆಲೂಗಡ್ಡೆ – ೩
*ದಪ್ಪ ಮೆಣಸಿನಕಾಯಿ – ೩
*ಹೂಕೋಸು – ೭-೮ ಪೀಸ್
*ಟೊಮೆಟೊ – ೩
*ಬಟಾಣಿ – ೧ ಕಪ್
*ಈರುಳ್ಳಿ -೨
*ಗೋಡಂಬಿ – ೧೦
*ಕೊತ್ತಂಬರಿ ಸೊಪ್ಪು –
*ಧನಿಯಾ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಅಚ್ಚಖಾರದ ಪುಡಿ – ೨ ಚಮಚ
*ಶುಂಠಿ, ಬೇಳುಳ್ಳಿ ಪೇಸ್ಟ್ – ೧ ಚಮಚ
*ಅರಿಶಿನ –
*ಜೀರಿಗೆ ಪುಡಿ -೧ ಚಮಚ
*ಫ್ರೆಷ್ ಕ್ರೀಂ – ೫ ಚಮಚ
*ಉಪ್ಪು –
*ಎಣ್ಣೆ –
*ನೀರು –

ಮಾಡುವ ವಿಧಾನ:
ಪ್ಯಾನಿಗೆ ಎಣ್ಣೆ ಹಾಕಿ. ಕಾದ ಮೇಲೆ ಈರುಳ್ಳಿ, ಟೊಮೆಟೊ, ಗೋಡಂಬಿ, ಅರಿಶಿನ ಹಾಕಿ ಹುರಿಯಿರಿ. ತಣ್ಣಗಾದ ಮೇಲೆ ರುಬ್ಬಿ ಕೊಳ್ಳಿ. ಪ್ಯಾನಿಗೆ ಎಣ್ಣೆ ಹಾಕಿ. ಕಾದ ಮೇಲೆ ಉದ್ದವಾಗಿ ಹೆಚ್ಚಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಹಸಿ ಬಟಾಣಿ, ಹೂಕೋಸು, ಉದ್ದವಾಗಿ ಹೆಚ್ಚಿದ ದಪ್ಪ ಮೆಣಸಿನಕಾಯಿ ಹಾಕಿ ಹುರಿದು, ಮುಚ್ಚಳ ಮುಚ್ಚಿ ಬೇಯಲು ಬಿಡಿ. ಇದಕ್ಕೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕೈ ಯಾಡಿಸಿ. ಉಪ್ಪು, ಜೀರಿಗೆ ಪುಡಿ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಶುಂಠಿ ಬೆಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಫ್ರೆಷ್ ಕ್ರೀಂ ಹಾಕಿ ಕಲಸಿ. ಈಗ ವೆಜಿಟೆಬಲ್ ಬಾತ್ ಸವಿಯಲು ರೆಡಿ.