
ಬೇಕಾಗುವ ಸಾಮಗ್ರಿಗಳು
- ಕ್ಯಾರೆಟ್ -೨
- ಹುರುಳಿಕಾಯಿ – ೮
- ಬಟಾಣಿ – ೧೦೦ ಗ್ರಾಂ
- ಹೂಕೋಸು – ೧೦೦ ಗ್ರಾಂ
- ಅರಿಶಿಣ ಪುಡಿ – ೧\೪ ಚಮಚ
- ಗೋಡಂಬಿ – ೫೦ ಗ್ರಾಂ
- ಮೆಂತ್ಯ ಸೊಪ್ಪು – ೨ ಚಮಚ
- ಟೊಮೆಟೊ – ೧
- ಈರುಳ್ಳಿ – ೨
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
- ಗರಂ ಮಸಾಲ – ೧ ಚಮಚ
- ಅಚ್ಚಖಾರದ ಪುಡಿ – ೧ ಚಮಚ
- ಧನಿಯಾ ಪುಡಿ – ೧ ಚಮಚ
- ಬೆಣ್ಣೆ – ೧ ಚಮಚ
- ಉಪ್ಪು – ೧ ಚಮಚ
- ಎಣ್ಣೆ – ೩ ಚಮಚ
- ನೀರು – ೧\೨ ಲೀಟರ್
- ಮಾಡುವ ವಿಧಾನ:
ಬಾಣಲಿಗೆ ಹೆಚ್ಚಿದ ಕ್ಯಾರೆಟ್, ಹುರುಳಿಕಾಯಿ, ಬಟಾಣಿ, ಹೂಕೋಸು, ಉಪ್ಪು, ಅರಿಶಿಣಪುಡಿ, ಅಗತ್ಯವಿರುವಷ್ಟ ನೀರು ಹಾಕಿ ಬೇಯಿಸಿ, ಟೊಮೆಟೊ, ಗೋಡಂಬಿಯನ್ನು ರುಬ್ಬಿಕೊಳ್ಳಿ ಪ್ಯಾನಿಗೆ ಎಣ್ಣೆ ಹಾಕಿ ಕಾದ ಮೇಲೆ ಹೆಚ್ಚಿದ ಮೆಂತ್ಯಸೊಪ್ಪು, ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಗರಂ ಮಸಾಲಾ, ಅಚ್ಚಖಾರದ ಪುಡಿ, ಧನಿಯಾ ಪುಡಿ, ರುಬ್ಬಿಕೊಂಡ ಟೊಮೆಟೊ, ಗೋಡಂಬಿ ಪೇಸ್ಟ್, ಸ್ವಲ್ಪ ನೀರು, ಉಪ್ಪು, ಬೆಣ್ಣೆ ಹಾಕಿ ಹುರಿಯಿರಿ, ಇದಕ್ಕೆ ಬೇಯಿಸಿಟ್ಟ ತರಕಾರಿಗಳನ್ನು ಹಾಕಿ ಕುದಿಸಿದರೆ ವೆಜಿಟೇಬಲ್ ಕರ್ರಿ ರೆಡಿ.