ವೆಜಿಟೆಬಲ್ ಮನಿಬ್ಯಾಗ್

ಬೇಕಾಗು ಸಾಮಗ್ರಿಗಳು

*ಮೈದಾ ಹಿಟ್ಟು – ೧ ಬೌಲ್
*ಆಲೂಗಡ್ಡೆ – ೨
*ಬೀನ್ಸ್ – ೫
*ಕ್ಯಾರೆಟ್ – ೨
*ಹೂ ಕೋಸು – ೫ ಪೀಸ್
*ಬಟಾಣಿ- ೧ ಕಪ್
*ಅರಿಶಿಣ – ೧ ಚಮಚ
*ಅಡುಗೆ ಸೋಡ – ೧/೪ ಚಮಚ
*ಹಸಿರು ಮೆಣಸಿನಕಾಯಿ -೩
*ಅಚ್ಚಖಾರದ ಪುಡಿ – ೧ ಚಮಚ
*ಟೊಮೆಟೊ ಸಾಸ್ – ೪ ಚಮಚ
*ಕೊತ್ತಂಬರಿ ಸೊಪ್ಪು –
*ಈರುಳ್ಳಿ – ೨
*ಜೀರಿಗೆ ಪುಡಿ – ೨ ಚಮಚ
*ಗರಂ ಮಸಾಲ – ೨ ಚಮಚ
*ಚಿಲ್ಲಿ ಸಾಸ್ – ೧ ಚಮಚ
*ನಿಂಬೆರಸ – ೧ ಚಮಚ
*ಉಪ್ಪು-
*ಎಣ್ಣೆ –
*ನೀರು –

ಮಾಡುವ ವಿಧಾನ :

ಬೌಲ್‌ಗೆ ಮೈದಾ ಹಿಟ್ಟು, ಉಪ್ಪು, ಅಡುಗೆ ಸೋಡಾ ಹಾಗೂ ಅಗತ್ಯವಿರುವಷ್ಟು ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕುಕ್ಕರಿಗೆ ನೀರು ಹಾಕಿ, ಆಲೂಗಡ್ಡೆ, ಬಟಾಣಿ, ಬೀನ್ಸ್, ಹೂಕೋಸು, ಕ್ಯಾರೆಟ್, ಅಚ್ಚಖಾರದ ಪುಡಿ, ಅರಿಶಿಣ ಹಾಕಿ, ಮುಚ್ಚಳ ಮುಚ್ಚಿ ಬೇಯಲು ಬಿಡಿ. ಬೆಂದ ಮೇಲೆ ಬೌಲ್‌ಗೆ ಸೋಸಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ. ಕಾದ ಎಣ್ಣೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೇಯಿಸಿಕೊಂಡ ತರಕಾರಿಗಳನ್ನು ಹಾಕಿ ಬಾಡಿಸಿ ಕೊಳ್ಳಿ. ಇದಕ್ಕೆ ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಅಚ್ಚಖಾರದ ಪುಡಿ, ಅರಿಶಿಣ, ಉಪ್ಪು, ಚಿಲ್ಲಿ ಸಾಸ್, ಟೊಮೆಟೊ ಸಾಸ್ ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಹಾಕಿ ಕಲಸಿಕೊಂಡು, ಮಿಶ್ರಣ ಸಿದ್ಧ ಮಾಡಿಕೊಳ್ಳಿ. ಕಲಸಿಕೊಂಡ ಮೈದಾ ಹಿಟ್ಟನ್ನು ಉಂಡೆಯನ್ನಾಗಿ ಮಾಡಿ. ಚಪಾತಿಯಂತೆ ಲಟ್ಟಿಸಿಕೊಳ್ಳಿ. ನಂತರ ಚಿಕ್ಕ ಚಿಕ್ಕದಾಗಿ ಭಾಗಗಳನ್ನು ಕಟ್ ಮಾಡಿಕೊಂಡು ತಯಾರಿಸಿಕೊಂಡ ಮಿಶ್ರಣವನ್ನು ಮಧ್ಯೆ ಇಟ್ಟು ಮಡಚಿ ಮನಿ ಬ್ಯಾಗ್ ರೀತಿ ಕಟ್ಟಿ ಎಣ್ಣೆಯಲ್ಲಿ ಕರಿಯಿರಿ.