
ಬೇಕಾಗುವ ಪದಾರ್ಥಗಳು:
ಪುದೀನಾಎಲೆ – ೧ ಲೋಟ
ಕೊತ್ತಂಬರಿಸೊಪ್ಪು – ೧ ಲೋಟ
ಹಸಿಮೆಣಸಿನಕಾಯಿ – ೬ – ೮
ಮೈದಾಹಿಟ್ಟು – ೧ ಲೋಟ
ಕ್ಯಾಪ್ಸಿಕಮ್ – ೧ ಲೋಟ
ಕ್ಯಾರೆಟ್ – ೧ ಲೋಟ
ಹೂಕೋಸು – ೧ ಲೋಟ
ಎಲೆಕೋಸು – ೧ ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಕಾರ್ನ್‌ಫ್ಲೋರ್ – ೧ ಲೋಟ
ಎಣ್ಣೆ – ಕರಿಯಲು
ಈರುಳ್ಳಿ – ೫
ವಿಧಾನ:
ಪುದಿನಾಎಲೆ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ, ನೀರು ಹಾಕಿ ರುಬ್ಬಿ, ಚಟ್ನಿ ತಯಾರಿಸಬೇಕು. ಈ ಚಟ್ನಿಯನ್ನು ೩ ಚಮಚ ತೆಗೆದುಕೊಂಡು ಇದಕ್ಕೆ ಮೈದಾಹಿಟ್ಟು, ಕಾರ್ನ್‌ಫ್ಲೋರ್, ಚಿಕ್ಕದಾಗಿ ಹೆಚ್ಚಿದ ಅಥವಾ ತುರಿದ ಕ್ಯಾಪ್ಸಿಕಮ್, ಕ್ಯಾರೆಟ್, ಹೂಕೋಸು, ಎಲೆಕೋಸು, ಉಪ್ಪು ಹಾಕಿ, ಹಿಡಿಸುವಷ್ಟು ನೀರುಹಾಕಿ ಕಲೆಸಿ, ಉಂಡೆಮಾಡಿ ಎಣ್ಣೆಯಲ್ಲಿ ಕರಿಯಬೇಕು. ಎಣ್ಣೆಗೆ ತೆಳ್ಳಗೆ ಉದ್ದ ಸೀಳಿದ ಈರುಳ್ಳಿ ಹಾಕಿ ಬಾಡಿಸಿ, ನಂತರ ಉಳಿದ ರುಬ್ಬಿದ ಚಟ್ನಿ ಹಾಕಿ ಬಾಡಿಸಿ, ಹಸಿವಾಸನೆ ಹೋದಮೇಲೆ, ಕರಿದ ಉಂಡೆ ಹಾಕಿ ಬಾಡಿಸಿದರೆ ತಯಾರಾಗುತ್ತದೆ.