ವೆಚ್ಚ ವೀಕ್ಷಕರಿಂದ ಲೆಕ್ಕ ಪರಿಶೀಲನೆ

ಇಂಡಿ:ಎ.28:ಚುನಾವಣೆ ಲೆಕ್ಕ ವೀಕ್ಷಕರಾದ ರೋಹನಲಾಲ ಮಿನಿ ವಿಧಾನಸೌಧದ ಕಂದಾಯ ಉಪವಿಬಾಗಾಧಿಕಾರಿಗಳ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳ ಚುನಾವಣೆ ವೆಚ್ಚ ಪರಿಶೀಲಿಸಿದರು.

ಎಸಿ ರಾಮಚಂದ್ರ ಗಡದೆ ಮಾತನಾಡಿ ಏ. 25 ರ ವರೆಗೆ ಆದ ಲೆಕ್ಕ ಪತ್ರಗಳನ್ನು ಪರಿಶೀಲಿಸಲಾಗಿದ್ದು ಇನ್ನು ಎರಡು ಹಂತದಲ್ಲಿ ಲೆಕ್ಕ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಬಿಎಸ್‍ಪಿ ಪಕ್ಷದ ಅಭ್ಯರ್ಥಿ ನಾಗೇಶ ಶಿವಶರಣ,ಕೆಆರ್‍ಎಸ್ ಪಕ್ಷದ ಅಭ್ಯರ್ಥಿ ಅಶೋಕ ಜಾಧವ, ಕಾಂಗ್ರೆಸ್ ನ ಇಲಿಯಾಸ ಬೋರಾಮಣಿ, ಬಿಜೆಪಿಯ ಪುಟ್ಟಣಗೌಡ ಪಾಟೀಲ,ಜೆಡಿ ಎಸ್ ಏಜಂಟರು ಮತ್ತು ಇತರೆ ಪಕ್ಷದ ಮತ್ತು ಪಕ್ಷೇತರ ಅಭ್ಯರ್ಥಿಗಳ ಏಜಂಟರು ಪಾಲ್ಗೊಂಡಿದ್ದರು.