ವೆಚ್ಚ ವೀಕ್ಷಕರಿಂದ ಚೆಕ್ ಪೋಸ್ಟ್‍ಗಳಿಗೆ ಭೇಟಿ-ಪರಿಶೀಲನೆ

ಚಾಮರಾಜನಗರ, ಏ.16:- ಚುನಾವಣಾ ವೆಚ್ಚ ವೀಕ್ಷಕರಾದ ಹಿಮಾಂಶು. ಪಿ. ಜೋಶಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಬಳಿಕ ವಿವಿಧ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ, ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನಿಯೋಜನೆಗೊಂಡಿರುವ ಸ್ಥಾಯಿ ಸರ್ವೇಕ್ಷಣಾತಂಡ, ವೀಡಿಯೋ ಸರ್ವೇಕ್ಷಣಾತಂಡ, ವೆಚ್ಚ ಮೇಲ್ವಿಚಾರಣೆ, ವೀಡಿಯೋ ವೀಕ್ಷಣೆ ಹಾಗೂ ನಿರ್ವಹಣೆ, ಫ್ಲೈಯಿಂಗ್ ಸ್ಕ್ವಾಡ್‍ತಂಡ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ದಕ್ಷತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕೆಂದು ಚುನಾವಣಾ ವೆಚ್ಚ ವೀಕ್ಷಕರು ಸೂಚನೆ ನೀಡಿದರು.
ಬಳಿಕ ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರ ವ್ಯಾಪ್ತಿಗೆ ಬರುವ ಮೂಲೆಹೊಳೆ, ಕೆಕ್ಕನಹಳ್ಳ ಅಂತರ ರಾಜ್ಯ ಚೆಕ್‍ಪೋಸ್ಟ್ ಹಾಗೂ ಹಿರಿಕಾಟಿ, ಕುರುಬರಹುಂಡಿ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿಕಾರ್ಯನಿರ್ವಹಣೆ ಪರಿಶೀಲಿಸಿದರು.
ಚೆಕ್ ಪೋಸ್ಟ್ ಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳಿಂದ ತಪಾಸಣೆ ಸೇರಿದಂತೆ ಕೈಗೊಳ್ಳÀಲಾಗುತ್ತಿರುವ ಕರ್ತವ್ಯ ನಿರ್ವಹಣೆಕುರಿತು ವೆಚ್ಚ ವೀಕ್ಷಕರಾದ ಹಿಮಾಂಶು. ಪಿ. ಜೋಶಿ ಅವರು ವಿವರವಾದ ಮಾಹಿತಿ ಪಡೆದರು.