ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

ಆನೇಕಲ್. ಫೆ. ೨೩ – ಆನೇಕಲ್ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಮುಖೇನ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಬಿ.ಶಿವಣ್ಣರವರು ತಿಳಿಸಿದರು.
ಅವರು ಚಂದಾಪುರ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ನಗರೋತ್ಥಾನ ಹಂತ ೪ ಹಾಗೂ ೧೫ ನೇ ಹಣಕಾಸು ಯೋಜನೆ, ಎಸ್,ಎಪ್,ಸಿ ಮುಕ್ತನಿಧಿ ಅನುದಾನ ಹಾಗೂ ಪುರಸಭಾ ನಿಧಿಯಡಿಯಲ್ಲಿ ಸುಮಾರು ೧೨ ಕೋಟಿ ೧೫ ಲಕ್ಷ ರೂಪಾಯಿ ವೆಚ್ಚದ ರಸ್ತೆ. ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಯಾವ ಗ್ರಾಮಗಳಲ್ಲಿ ಸಮಸ್ಯೆಗಳು ಹೆಚ್ಚಾಗಿದೆ ಅಲ್ಲಿ ಮೊದಲನೆ ಆದ್ಯತೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಹಂತ ಹಂತವಾಗಿ ಗ್ರಾಮಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಆನೇಕಲ್ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಇನ್ನು ಕಾಮಗಾರಿ ನಡೆಯುವಂತಹ ಸಂಧರ್ಭದಲ್ಲಿ ಪುರಸಭೆ ಸದಸ್ಯರು, ಸ್ಥಳೀಯ ಮುಖಂಡರುಗಳು ಖುದ್ದು ಹಾಜರಿದ್ದು ಕಾಮಗಾರಿಯು ಗುಣ ಮಟ್ಟದಿಂದ ನಡೆಯುವಂತೆ ನೋಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಂದಾಪುರ ಪುರಸಭೆ ಮುಖ್ಯಾದಿಕಾರಿ ಶ್ರೀನಿವಾಸ್, ಇಂಜಿನಿಯರ್ ಆದರ್ಶ್ ಮತ್ತು ಪುರಸಭೆ ಅದಿಕಾರಿಗಳು ಹಾಗೂ ಚಂದಾಪುರ ಪುರಸಭೆ ಸದಸ್ಯರು, ಸ್ಥಳೀಯ ಮುಖಂಡರುಗಳು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.