ವೆಂಟಿಲೇಟರ್ ಇದ್ದರೂ ಬಳಕೆಯಿಲ್ಲ; ಸುಧಾಕರ್ ಬೇಸರ

ಕೋಲಾರ್, ಏ, ೨೭-ಕೊರೊನಾ ರೋಗಿಗಳನ್ನು ನೋಡಿಕೊಳ್ಳುವುದಕ್ಕೆ ಅಟೆಂಡರ್ ಇಟ್ಟಿರುವಂತಹದ್ದು, ರಾಜ್ಯದಲ್ಲೆ ಎಲ್ಲೂ, ಇಲ್ಲ ಇದು ತಪ್ಪು ಎಂದು ಸಚಿವ ಸುಧಾಕರ್ ಹೇಳಿಕೆ ನೀಡಿದರು.
ಆಕ್ಸಿಜನ್ ಕೊರತೆಯಿಂದಾಗಿ ಎಂಟು ಜನ ಮೃತಪಟ್ಟ ಹಿನ್ನಲೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಲವತ್ತು ವೆಂಟಿಲೇಟರ್ ಇದ್ದರೂ ಬಳಕೆ ಮಾಡುತ್ತಿಲ್ಲ, ಇದೊಂದು ದೊಡ್ಡ ಅಪರಾಧ, ಇದರಿಂದಾಗಿ ಪ್ರತಿನಿತ್ಯ ಹತ್ತರಿಂದ ಹನ್ನೊಂದು ಜನ ಸಾಯುತ್ತಿದ್ದಾರೆ ಎಂದು ಆಸ್ಪತ್ರೆಯವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿಗೆ ಕಾಣುವಷ್ಟು ಲೋಪದೋಷಗಳಿದ್ದು, ಜಿಲ್ಲಾಶಸ್ತ್ರಚಿಕಿತ್ಸಕರ ಅಮಾನತು ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶಿಸಿರುವುದಾಗಿ ಹೇಳಿದ್ರು. ಜೊತೆಗೆ ಗ್ರಾಮದ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದರು. ಅಲ್ಲದೆ ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ಮಾಡಲಾಗಿದೆ ಎಂದು ತಿಳಿಸಿದರು.
ಕೋಲಾರದ ಜಿಲ್ಲಾ ಆಸ್ಪತ್ರೆ ಯಲ್ಲಿ ಆಕ್ಸಿಜನ್ ವ್ಯತ್ಯಯದಿಂದ ಎಂಟು ಜನ ಪ್ರಾಣಕಳೆದುಕೊಂಡ ಹಿನ್ನಲೆ ಆರೋಗ್ಯ ಸಚಿವ ಸುಧಾಕರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರ ಭೇಟಿ ಹಿನ್ನಲೆ ಜಿಲ್ಲಾಧಿಕಾರಿ ,ಪೋಲೀಸ್ ವರಿಷ್ಟಾಧಿಕಾರಿ,ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಸಚಿವರಿಗಾಗಿ ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದರು.
ಇದಕ್ಕು ಮುನ್ನ ಕೋವಿಡ್ ರೋಗಿಯ ಸಂಬಂಧಿ ಮಹಿಳೆಯೊಬ್ಬರು ಸಚಿವರ ಕಾಲಿಗೆ ಬಿದ್ದು ನಮ್ಮವರನ್ನು ಉಳಿಸಕೊಡಿ ಎಂದು ಅಂಗಲಾಚಿದರು. ತಡರಾತ್ರಿಯವರೆಗೆ ಅಧಿಕಾರಿಗಳ ಸಭೆನಡೆಸಿದ ಸಚಿವರು ಮಾದ್ಯಮದವರನ್ನ ಹೊರಗಿಟ್ಟು ಸಭೆ ನಡೆಸಿದರು. ಆದರೆ ತಮ್ಮಜೊತೆಯಲ್ಲಿ ಬಂದಿದ್ದ ಫೋಟೋ ಗ್ರಾಫರ್ ರಿಂದ ತಮ್ಮ ಸಭೆಯ ಫೇಸ್ ಬುಕ್ ಲೈವ್ ನೀಡಿದರು.