ವೆಂಕಟೇಶ ಪೂಜಾರಿ ನಿಧನ ಸಂತಾಪ.


ದೇವದುರ್ಗ.ನ.೩- ಕ್ಯಾದಿಗೇರಾ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ ಪೂಜಾರಿ ಅರಕೇರಾ ಅವರು ಸೋiವಾರ ರಾತ್ರಿ ಮೃತಪಟಿದ್ದು, ಅವರ ಆಗಲಿಕಿಯನ್ನು ತುಂಬಲಾರದಷ್ಟು ನೂವುಟುಂಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭೀಮನಗೌಡ ಪೂಲೀಸ್ ಪಾಟೀಲ ನಗಡದಿನ್ನಿ ಅವರು ತೀವ್ರ ಸಂತಾಪ ಸೂಚಿಸಿದರು.
ವೆಂಕಟೇಶ ಪೂಜಾರಿ ಅವರಿಗೆ ೪೫ವರ್ಷ ವಯಸ್ಸಾಗಿದ್ದವು.ಕಳೆದೊಂದು ತಿಂಗಳಿನಿಂದ ತೀವ್ರ ಅನುರೋಗ್ಯದಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ,ಇಬ್ಬರು ಪುತ್ರಿಯರು ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಆಗಲಿದ್ದಾರೆ.ಶಾಸಕರಾದ ಕೆ.ಶಿವನಗೌಡ ನಾಯಕ ಅವರ ಸಹೋದರಿಯ ಪತಿಯಾಗಿರುವ ಇವರು ಸರಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ನಂತರ ಶಿಕ್ಷಕ ಹುದ್ದೆಗೆ ರಾಜೀನಾಮೆ ಸಲ್ಲಿಸಿ,ಬಿಜೆಪಿ ಪಕ್ಷಕ್ಕೆ ಸೇರಪರ್ಡಗೊಂಡುದ್ದರು.ಬಿಜೆಪಿ ಪಕ್ಷದಿಂದ ತಾಲೂಕಿನ ಕ್ಯಾದಿಗೇರಾ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೇಯಾಗಿದ್ದರು. ಬದಲಾದ ರಾಜಕಾರಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಧಾನಕ್ಕೆ ರಾಜೀನಾಮೆ ನೀಡಿ, ದೇವದುರ್ಗ ವಿಧಾನ ಸಭಾ ಕ್ಷೇತ್ರಕ್ಕೆ ೨೦೧೮ರಲ್ಲಿ ನಡೆದ ಚುನಾವಣೆಯಲ್ಲಿಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿ ಪರಭವಗೊಂಡಿದ್ದರು. ಅರಕೇರಾ ಭಾಗದಲ್ಲಿ ಶ್ರೀಭಾಗಮ್ಮ ದೇವಸ್ಧಾನದ ಪೂಜಾರಿ ಮನೆತನದ ಇವರು ಅರಕೇರಾ ಭಾಗದ ಜನಪ್ರಿಯರಾಗಿದ್ದರು.ಇವರ ನಿಧನಕ್ಕೆ ಶಾಸಕ ಕೆ.ಶಿವನಗೌಡ ನಾಯಕರು.ಮಾಜಿ ಸಂಸದ ಬಿ,ವಿ ನಾಯಕ,ಎ.ರಾಜಶೇಖರ ನಾಯಕ.ಬಸವರಾಜ ಪಾಟೀಲ್ ಇಟಗಿ.ಜೆಡಿಎಸ್.ಹಿರಿಯ ಮುಖಂಡರಾದ ಕರೆಮ್ಮ ನಾಯಕ.ಚಿತಲಕುಂಟಿ ಅನಂತರಾಜ್ ನಾಯಕ ಸೇರಿದಂತೆ ಇತರರು ತೀವ್ರ ಸಂತಾಪ ಸೂಚಿಸಿದ್ದಾರೆ.ವೆಂಕಟೇಶ ಪೂಜಾರಿ ಅತ್ಮಕ್ಕೆ ಆಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಖಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.