ವೆಂಕಟೇಶ ಪೂಜಾರಿ ಗುಣಮುಖರಾಗುವಂತೆ ವಿಶೇಷ ಪೂಜೆ


ಅರಕೇರಾ.ನ.೨-ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವೆಂಕಟೇಶ ಪೂಜಾರಿ ಬೇಗ ಗುಣಮುಖರಾಗುವಂತೆ ಮುಂಡರಗಿ ಶ್ರೀ ಶಿವರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ವೆಂಕಟೇಶ ಪೂಜಾರಿ, ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿ ಬಳಗ ಸೇರಿದಂತೆ ಗ್ರಾಮಸ್ಥರು ಗ್ರಾಮದ ಯುವಕರಾದ ಇಂದು ಸೋಮವಾರ ದಿವಸದಂದು ಶ್ರೀ ಮುಂಡರಗಿ ಗ್ರಾಮಕ್ಕೆ ತರೆಳಿ ಬೆಟ್ಟದಮೇಲಿರುವ ಶ್ರೀಶಿವರಾಯದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕಾಯಿ ಕರ್ಪೂರವನ್ನು ಸಲ್ಲಿಸಿದರು. ನಾಗಯ್ಯಸ್ವಾಮಿ,ಅಂಜನೇಯ್ಯ ಸೇರಿದಂತೆ ಗಳೆಯರು ದೇವಸ್ಥಾನದ ಸುತ್ತಲು ಪ್ರದಕ್ಷಣೆಯನ್ನು ಹಾಕುವ ಮೂಲಕ ಪೂಜಾರಿ ಅವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದರು.