ವೆಂಕಟೇಶ ದೇವರಿಗೆ ಕಿರೀಟ ಸಮರ್ಪಣೆ

ವಿಜಯಪುರ, ನ.19-ನಗರದ ತೊರವಿ ರಸ್ತೆಯಲ್ಲಿರುವ ವಿಷ್ಣು ಸಹಸ್ರ ನಾಮ ಭವನದ ಶ್ರೀ ವೆಂಕಟೇಶದೇವರ ಸನ್ನಿಧಾನದಲ್ಲಿ ಇಂದು ದೀಪಾವಳಿಯ ಪ್ರತಿಪದೆ ನಿಮಿತ್ತ ಶ್ರೀ ವೆಂಕಟೇಶದೇವರಿಗೆ ಕಿರೀಟ ಸರ್ಮಪಣೆ ಮಾಡಲಾಯಿತು.
ಪಂಡಿತ ಮಧ್ವಾಚಾರ್ಯ ಮೊಖಾಶಿಯವರು ಮಹಿಪತಿ ಜೋಶಿ ಮತ್ತು ಸತೀಶ ಕುಲಕರ್ಣಿ ಇವರು ಸೇವಾ ರೂಪದಲ್ಲಿ ಸಲ್ಲಿಸಿದ ಕಿರೀಟವನ್ನು ಶ್ರೀ ವೆಂಕಟೇಶ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ ಅರ್ಪಣೆ ಮಾಡಿದರು.
ಬಲಿಪಾಡ್ಯಯ ಸುದಿನದಂದು ಭಗಂತನ ಅಲಂಕಾರ ವಿಶೇಷವಾಗಿತ್ತು. ವ್ಯಾಸ ಮಧ್ವ ಸಂಸ್ಕøತ ವಿದ್ಯಾಲಯದ ಪಂ ವೇದನಿಧಿ ಆಚಾರ್ಯರು, ಪಂ ಸತ್ಯವರ ಆಚಾರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅನೇಕ ಜನ ಸದ್‍ಗೃಹಸ್ಥರು, ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.