ವೆಂಕಟೇಶ್ ಹೆಗಡೆ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಜನ್ಮ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.15: :ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ, ಮಾಧ್ಯಮ ವಕ್ತಾರರಾದ  ವೆಂಕಟೇಶ್ ಹೆಗಡೆ  ನೇತೃತ್ವದಲ್ಲಿ ಇಂದು ಕೆಪಿಸಿಸಿಯ ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ನಗರದ ಆರಾಧ್ಯ ದೇವತೆ  ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೇಕೆ ಕತ್ತರಿಸಿ ಆಚರಿಸಲಾಯ್ತು.
ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಮುಂದಿನ‌ ದಿನದಲ್ಲಿ ಮುಖ್ಯಂಮತ್ರಿಗಳಾಗಲಿ ಎಂದು ಆಶಿಸಲಾಯ್ತು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು,  ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಮಹಾನಗರ ಪಾಲಿಕೆ ಪರಾಜಿತ ಅಭ್ಯರ್ಥಿ ವೀರೇಂದ್ರ ಕುಮಾರ್, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಭೋಯಾಪಾಟಿ ವಿಷ್ಣು, ಎಸ್.ಸಿ ವಿಭಾಗದ ಅಧ್ಯಕ್ಷ ಎನ್.ವಿ.ಯರಕುಲ ಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಂ.ಎಸ್.ಮಂಜುಳಾ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮಿ ನಾರಾಯಣ, ಡಿ.ಕೆ.ಶಿವಕುಮಾರ್ ಅಭಿಮಾನ ಬಳಗದ ಜಿಲ್ಲಾಧ್ಯಕ್ಷ ಸಂತೋಷ್ ಸ್ವಾಮಿ, ಕಾಂಗ್ರೆಸ್ ಮುಖಂಡ ಖಾಂಡ್ರ ಸತೀಶ್, ಶಕೀಲ್ ಅಹ್ಮದ್, ಆನಂದ್, ಬಾಬು, ಎರ್ರಿಸ್ವಾಮಿ ಹೆಗಡೆ, ಅನಿಲ್ ಕುಮಾರ್, ಸಿ.ಅತ್ತಾಉಲ್ಲಾ, ರಾಜ, ಪೆನ್ನಯ್ಯ, ಲಿಂಗರಾಜ್, ರಾಬಿನ್, ಪರಶುರಾಮ್, ಶ್ರೀಕಾಂತ್, ಮಲ್ಲಿಕಾರ್ಜುನ, ತಿಮ್ಮಪ್ಪ, ಜುಬೇರ್, ಸಂಜಯ್, ರಾಜ, ಶಬ್ಬೀರ್, ಮಹಿಳಾ ಮುಖಂಡರಾದ ರಿಹಾನ, ರೋಹಿಣಿ, ಮಲ್ಲಮ್ಮ, ಹಸೀನಾ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.