ವೆಂಕಟೇಶ್ ಕ್ಷತ್ರಿಯ ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ


ವಿಜಯನಗರ,ಜ.11: ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನವರಾದ ವೆಂಕಟೇಶ್ ಕ್ಷತ್ರಿಯ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ  ಅಧ್ಯಯನ ವಿಭಾಗದ ಡಾ.ವೈ.ಚಂದ್ರ ಬಾಬು ಅವರ ಮಾರ್ಗದರ್ಶನದಲ್ಲಿ *”ಕನ್ನಡ ಹವ್ಯಾಸಿ ರಂಗ ಭೂಮಿ ಪರಂಪರೆ ಮತ್ತು ರಂಗಭಾರತಿ; ಸಾಂಸ್ಕ್ರತಿಕ ಅಧ್ಯಯನ  ಎಂಬ ವಿಷಯ ಪ್ರಬಂಧ ಮಂಡನೆಗೆ ಬುಧವಾರರಂದು ನಡೆದ 32 ನೇ ನುಡಿಹಬ್ಬದಲ್ಲಿ ವಿವಿಯು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.