ವೆಂಕಟೇಶ್ವರ ಮಹಾತ್ಮೆ ಪ್ರವಚನ ಮಂಗಳ

ಕಲಬುರಗಿ,ಮೇ 19: ನಗರದ ನ್ಯೂ ರಾಘವೇಂದ್ರ ಕಾಲೋನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಮೇ.13 ರಿಂದ
17 ರವರೆಗೆ ಪಂಡಿತ ಗೋಪಾಲಾಚಾರ್ಯ ಅಕಮಂಚಿ ಅವರು ನಡೆಸಿಕೊಟ್ಟ ವೆಂಕಟೇಶ್ವರ ಮಹಾತ್ಮೆ ಪ್ರವಚನ ಮಂಗಳ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಜರುಗಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ನಾರಾಯಣರಾವ ಕುಲಕರ್ಣಿ, ಪದಾಧಿಕಾರಿಗಳಾದ ಪಿ.ಎನ್ ಜೋಶಿ,ಮೋಹನರಾವ ಚಿಮ್ಮನಚೋಡ, ವಿದ್ಯಾಸಾಗರ ಕುಲಕರ್ಣಿ, ಭಗವಾನರಾವ, ವಿಜಯಾಬಾಯಿ ಬಳವಡಗಿ,ನಾಗೇಶ ಸಿಂಧೆ, ಶ್ರೀನಿವಾಸರಾವ ಶಿರಬೂರು, ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ನೆಲೋಗಿ, ಜಯತೀರ್ಥ, ಬಾಬಣ್ಣ ಮೈನಾಳ ಹಾಗೂದೀಪಾ ಸಾವಳಗಿ ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.