ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮ


ಮುಧೋಳ.ಅ.18: ನವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಮುಧೋಳ ನಗರದ ಬಸ್ ನಿಲ್ದಾಣ ಪಕ್ಕದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅ. 15 ರಂದು ಘಟಸ್ಥಾಪನೆ ನೆರವೇರಿಸಲಾಯಿತು. ಅ. 19ರಂದು ಗರುಡ ಪಂಚಮಿ, ಅ. 22ರಂದು ಬೆಳಿಗ್ಗೆ 7 ಘಂಟೆಗೆ ರಥಾಂಗ ಹೋಮ, ಮಧ್ಯಾಹ್ನ 11.30 ಕ್ಕೆ ರಥೋತ್ಸವ (ಗುರ್ಗಾಷ್ಟಮಿ), ಅ. 23ರಂದು ವಿಜಯದಶಮಿ (ದಸರಾ), ಸಂಜೆ 5 ಘಂಟೆಗೆ ಬನ್ನಿ ಮುಡಿಯುವುದು, ಅ. 25 ರಂದು ಏಕಾದಶಿ, ಸಂಜೆ 6 ಘಃಂಟೆಗೆ ಗೋಪಾಳ ಕಾಲಾ, ಅ. 26 ರಂದು ಸಂಜೆ 5 ಘಂಟೆಗೆ ಕಾಡಾ ಕಾರ್ಯಕ್ರಮ ನಡೆಯಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಅ. 21 ರವರೆಗೆ ಪ್ರತಿದಿನ ಸಂಜೆ 6 ಘಂಟೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರರ ಮೂರ್ತಿ ಹಾಗೂ ವಾಹನೋತ್ಸವ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯು ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಾದ ಜಡಗಾ-ಬಾಲಾ ವೃತ್ತ, ಕಲ್ಮೇಶ್ವರ ವೃತ್ತ, ಗಾಂಧೀ ವೃತ್ತ, ಗೋವಿಂದಪೂರ ಗಲ್ಲಿ, ಡಾ.ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರ ವೃತ್ತ, ಮಾರ್ಗವಾಗಿ ಹಾಯ್ದು ಮರಳಿ ದೇವಸ್ಥಾನಕ್ಕೆ ತಲುಪುವುದು. ನಂತರ ಪ್ರತಿದಿನ ರಾತ್ರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂತ್ರಪುಷ್ಪ ಶ್ರೀನಿವಾಸ ಕಲ್ಯಾಣ ಪುರಾಣ, ಮಹಾಮಂಗಳಾರತಿ ನಂತರ ಪ್ರಸಾದ ಇರುವುದು.
ವಿಪ್ರ ಸಮಾಜದ ಪ್ರಮುಖರಾದ ಸೋನಾಪ್ಪಿ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಹನಮಂತ ಕುಲಕರ್ಣಿ, ರವಿ ದೇಸಾಯಿ, ವೆಂಕಟೇಶ ಚಿಕ್ಕೋಡಿಕರ, ಗುಂಡು ಸಿದ್ದಾಂತಿ, ಸುನೀಲ ನಾಯ್ಕ, ನಾರಾಯಣ ಕಟ್ಟಿ, ಆರ್ಚಕ ಗೋಪಾಲ.ರಾ.ಚಕೋತ ಇವರ ನೇತೃತ್ವದಲ್ಲಿ ಪ್ರತಿದಿನ ವಾಹನೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.