ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಕಲಬುರಗಿ,ಅ 13: ನಗರದ ನ್ಯೂ ರಾಘವೇಂದ್ರ ಕಾಲೋನಿ ವೆಂಕಟೇಶ್ವರ ದೇವಸ್ಥಾನದಲ್ಲಿ ಅ.15 ರಿಂದ 23 ರವರೆಗೆ 35 ನೇ ವರ್ಷದ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ.ಪ್ರತಿದಿನ ಮುಂಜಾನೆ ಸುಪ್ರಭಾತ,ಅಷ್ಟೋತ್ತರ, ,ಪಂಚಾಮೃತ ಅಭಿಷೇಕ, ಅಲಂಕಾರ ,ಮಧ್ಯಾಹ್ನ 12 ಕ್ಕೆ ಪೂಜೆ ,ಸಂಜೆ 4 ರಿಂದ 5.30ರವರೆಗೆ ಭಜನೆ ,ನಂತರ ವಾಹನೋತ್ಸವ ಜರುಗುವದು.ಪ್ರತಿದಿನ ರಾತ್ರಿ 8 ರಿಂದ 9 ಗಂಟೆವರೆಗೆ ಪಂ. ಗೋಪಾಲಾಚಾರ್ಯ ಅಕಮಂಚಿ ಅವರಿಂದ ಶ್ರೀ ವೆಂಕಟೇಶ್ವರ ಮಹಾತ್ಮೆ ಪ್ರವಚನ ನಡೆಯುವದು.
ರಥೋತ್ಸವ:
23 ರಂದು ಸಂಜೆ 4 ಗಂಟೆಗೆ ಶಮಿಪೂಜೆ ನಂತರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವರ ರಥೋತ್ಸವ ಜರುಗುವದು ಎಂದು ಶ್ರೀ ವೇಂಕಟೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣರಾವ ಕುಲಕರ್ಣಿ,ಪದಾಧಿಕಾರಿಗಳಾದ ಗೋವರ್ಧನರಾವ ದೇಶಪಾಂಡೆ,ವಿದ್ಯಾಸಾಗರ ಕುಲಕರ್ಣಿ,ಪಿಎನ್ ಜೋಶಿ,ಶ್ರೀನಿವಾಸರಾವ ಸಿರಬೂರ,ಮೋಹನರಾವ ಚಿಮ್ಮನಚೋಡ,ನಾಗೇಶ ಸಿಂಧೆ,ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ನೆಲೋಗಿ,ಜಯತೀರ್ಥ ಅವರು ತಿಳಿಸಿದ್ದಾರೆ.