ವೆಂಕಟಾಪುರ ಗ್ರಾಮದಲ್ಲಿ ೫೭ ಜನರಿಗೆ ಕೊರೊನಾ

ಹೊಸಪೇಟೆ ಏ೨೨: ಹೊಸಪೇಟೆ ತಾಲೂಕು ಸೇರಿದಂತೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ೫೭ ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಬುಧವಾರ ಗ್ರಾಮವನ್ನು ಮೈಕ್ರೋ ಸೀಲ್ಡೌನ್ ಮಾಡಲಾಗಿದೆ.
ವೆಂಕಟಾಪುರ ಗ್ರಾಮದಲ್ಲಿ ಈ ಹಿಂದೆ ೧೨ ಜನರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಅವರ ಪ್ರಾಥಮಿಕ ಸೋಂಕಿತರಿಗೆ ಟೆಸ್ಟ್ ಮಾಡಿಸಿದಾಗ ಮತ್ತಷ್ಟು ಜನರಿಗೆ ಪಾಸಿಟಿವ್ ಧೃಡವಾಗಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಮೊಕ್ಕಾಂ ಹೂಡಿದ್ದು, ಜನರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುತ್ತಿದೆ. ಜತೆಗೆ ವೆಂಕಟಾಪುರ ಗ್ರಾಮವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು. ಮೈಕ್ರೋ ಸೀಲ್ಡೌನ್ ಮಾಡಿದ್ದಾರೆ. ಸ್ಯಾನಿಟೈಸೇನ್, ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡುವ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪಟ್ಟು ೨೨೩ ಪ್ರಕರಣಗಳು ವರದಿಯಾಗಿದ್ದು ಹೊಸಪೇಟೆ ಒಂದರಲ್ಲಿಯೇ ೧೨೦ ಪ್ರಕರಣಗಳು ಬೆಳೆಕಿಗೆ ಬಂದಿವೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಒಟ್ಟು ೭೯೨ ಪ್ರಕರಣಗಳು ಬುಧುವಾರ ದಾಖಲಾಗಿವೆ.


ವದಂತಿಗೆ ಕಿವಿಗೊಡಬೇಡಿ:
ಕರೋರಾ ಸ್ಪೋಟದಿಂದ ಅನೇಕರಿಗೆ ಅನೇಕ ರೀತಿಯಲ್ಲಿ ಅನುಮಾನಗಳ ವದಂತಿಗಳ ಹರಡುತ್ತಿದ್ದು ಅನಗತ್ಯವಾಗಿ ಜನರು ಭಯಪಡಬಾರದು, ಸ್ಪಷ್ಟ ಮಾಹಿತಿಗಳನ್ನು ತಿಳಿದು ವರ್ತಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಬಾಸ್ಕರ್ ತಿಳಿಸಿದ್ದಾರೆ, ಅನಗತ್ಯವಾಗಿ ತಿರುಗಾಡುವುದು, ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಹೊರಬರುವುದು ಸೇರಿದಂತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
ಈ ಮಧ್ಯ ಕೋವಿಡ್ ಪ್ರಕರಣಗಳ ವೃದ್ಧಿಯ ಹಿನ್ನೆಯಲ್ಲಿ ಕಂಟ್ರೋಲ್ ರೂಂ ಸಹ ಆರಂಭಿಸಲಾಗಿದೆ. ಇದು ದಿನದ ೨೪ ಗಂಟೆ ಕಾರ್ಯನಿರ್ವಹಿಸಲಿದೆ. ಕಂಟ್ರೋಲ್ ರೂಂ ಸಂಖ್ಯೆ: ೦೮೩೯೪-೨೨೪೨೦೮ಗೆ ಸಂಪರ್ಕಿಸಿ ಕೋವಿಡ್ ಕುರಿತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಜಿಲ್ಲಾಡಳಿತ ಮಾಹಿತಿ ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ