ವೆಂಕಟಾಚಲ ಅವದೂತ ಗುರುವಿನ ಅನುಗ್ರಹ ಮುಖ್ಯ: ಡಿ.ಟಿ ಪ್ರಕಾಶ್

ಮೈಸೂರು: ಜು.13:- ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ಅಭಿಪ್ರಾಯಪಟ್ಟರು.
ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿ ಮೈಸೂರು ಅವಧೂತ ದತ್ತ ಶಾಹಿ ಪೀಠಕಾ ಜನಸೇವ ಟ್ರಸ್ಟ್ ವತಿಯಿಂದ ನಡೆದ ಗುರುಪೂರ್ಣಿಮೆ ಹಾಗೂ ಗುರುಗಳ ಸಮಾನರಾದ ವೆಂಕಟಾಚಲ ಅವಧೂತ ಮಹಾರಾಜರ ಸ್ಮರಣಾರ್ಥ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ನಂತರ ರಸ್ತೆ ಬದಿಯಲ್ಲಿರುವ ಗೋವುಗಳಿಗೆ ಮೇವುಗಳನ್ನು ನೀಡಿ ಮಾತನಾಡಿ ಅವರು ದೇಶದ ಸನಾತನ ಪರಂಪರೆಯನ್ನು ಗುರುಶಿಷ್ಯರ ಬಹಳ ಮಹತ್ವವಿದೆ. ನಮ್ಮಲ್ಲಿರುವ ಚಂಚಲವಾದ ಬುದ್ಧಿ ಹಾಗೂ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮ ಚಿಂತನೆಯನ್ನು ಮಾಡಬೇಕು ಎಂದರು.
ನಂತರ ಮಾತನಾಡಿದ ಮೈಸೂರು ಅವಧೂತ ದತ್ತ ಶಾಹಿ ಪೀಠಕಾ ಜನಸೇವ ಟ್ರಸ್ಟ್ ಸಂಚಾಲಕರಾದ ರಿಷಿ ವಿಶ್ವಕರ್ಮ ಭಾರತ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆ ಮಹತ್ವವನ್ನು ಪಡೆದುಕೊಂಡಿದೆ. ಗುರುಗಳಿಗೆ ಗೌರವ. ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಈ ಸಾರ್ಥಕ ಸೇವಾ ಕಾರ್ಯ ಮಹತ್ವವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಖ್ಯಾತ ವೈದ್ಯರಾದ ಡಾ.ಲಕ್ಷ್ಮಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಸೌಭಾಗ್ಯ ಮೂರ್ತಿ, ಶ್ರೀಕಾಂತ್ ಕಶ್ಯಪ್, ಸುಚೀಂದ್ರ, ಶಿವು, ಮಹದೇವ್ ಪ್ರಸಾದ್, ಶರತ್ ಬಂದಾರಿ, ಚಕ್ರಪಾಣಿ, ಲಿಂಗರಾಜು, ರಂಗಣ್ಣ, ಸುನೀಲ್, ನಾಗಶ್ರೀ ಹಾಗೂ ಇನ್ನಿತರರು ಹಾಜರಿದ್ದರು.