ವೃದ್ಧೆಯ ಮೇಲೆ ಅತ್ಯಾಚಾರ:ಇಬ್ಬರ ಬಂಧನ

ವಿಜಯಪುರ,ಮಾ 5: ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ವಿಜಯಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ಬಂಧಿತ ಆರೋಪಿಗಳು.
ರಾತ್ರಿ ಆಟೋ ಹತ್ತಿದ 60 ರ ಒಬ್ಬಂಟಿ ವೃದ್ಧೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿ ಪರಾರಿ ಆಗಿದ್ದರು. ಫೆಬ್ರವರಿ 23ರ ರಾತ್ರಿ ಮನೆಗೆ ಹೊಗಬೇಕು ಎಂದು ವಿಜಯಪುರ ನಗರದ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ವೃದ್ಧೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಇವರು ಪರಾರಿಯಾಗಿದ್ದರು. ತನಿಖೆ ನಡೆಸಿ, ಅತ್ಯಾಚಾರ ಎಸಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ವಿಜಯಪುರ ಮಹಿಳಾ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.