ವೃದ್ಧೆಯ ಕೊರಳಲ್ಲಿದ್ದ 30 ಗ್ರಾಂ.ಚಿನ್ನದ ಸರ ಕಿತ್ತುಕೊಂಡು ಪರಾರಿ

ಕಲಬುರಗಿ,ಜು.30-ಮನೆಯ ಕಡೆ ನಡೆದುಕೊಂಡು ಹೊರಟಿದ್ದ ವೃದ್ಧೆಯ ಕೊರಳಲ್ಲಿದ್ದ 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜೇವರ್ಗಿ ಕಾಲೋನಿಯ ಮಾಕಾ ಲೇಔಟ್‍ನಲ್ಲಿ ನಡೆದಿದೆ.
ಮಾಕಾ ಲೇಔಟ್ ನಿವಾಸಿ ಕವಿತಾ ಬಸವರಾಜ ಮಿರಗಿಮಠ (69) ಅವರು ಮನೆಯ ಪಕ್ಕದಲ್ಲಿರುವ ಟೇಲರ್ ಅಂಗಡಿಗೆ ಹೋಗಿ ಮರಳಿ ಮನೆಯ ಕಡೆಗೆ ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ ಇಬ್ಬರು ಸರಗಳ್ಳರು ಅವರ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.