ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯರು

ರಾಯಚೂರು.ಮಾ.೨೨- ನಗರದ ಖ್ಯಾತ ಹಾಗೂ ಹೆಸರಾಂತ ವೈದ್ಯರಾದ, ಬಡವರ ಬಂದು ಕೊಡುಗೈ ದಾನಿ, ದಿನ-ದಲಿತರ ಸದಾ ಸೇವೆ ಮಾಡುವ ರಾಮಕೃಷ್ಣ ಎಂ.ಆರ್ (ಒಒಃS ಒಆ) ರವರ ಹುಟ್ಟು ಹಬ್ಬವನ್ನು ಅವರ ಧರ್ಮ ಪತ್ನಿ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಅವರ ಅಭಿಮಾನಿಗಳ ವತಿಯಿಂದ ಸರಳವಾಗಿ ನಗರದ ಅಶಾಪೂರ್ ರಸ್ತೆಯ ಲಲಿತ ವೃದ್ಧಾಶ್ರಮದಲ್ಲಿ ನೆರವೇರಿಸಿ, ಅಲ್ಲಿರುವ ಎಲ್ಲರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರಂಜಿತ್ ದಂಡೋರ ಹಾಗೂ ಅವರ ಅಭಿಮಾನಿಗಳು ಭಾಗವಹಿಸಿದ್ದರು.